Bengaluru, ಮೇ 18 -- ಅರ್ಥ: ಪರಮ ಸತ್ಯನು ಎಲ್ಲ ಜೀವಿಗಳ ಮತ್ತು ಚರಾಚರಗಳ ಒಳಗೂ ಹೊರಗೂ ಇದ್ದಾನೆ. ಆತನು ಸೂಕ್ಷ್ಮನಾದದ್ದರಿಂದ ಐಹಿಕ ಇಂದ್ರಿಯಗಳು ಅವನನ್ನು ನೋಡಲಾರವು ಮತ್ತು ತಿಳಿಯಲಾರವು. ಬಹುದೂರದಲ್ಲಿದ್ದರೂ ಅವನು ಎಲ್ಲರಿಗೂ ಸಮೀಪದಲ್ಲಿದ್ದಾನೆ.

ಭಾವಾರ್ಥ: ಪರಮ ಪುರುಷನಾದ ನಾರಾಯಣನು ಪ್ರತಿಯೊಂದು ಜೀವಿಯ ಒಳಗೂ ಹೊರಗೂ ವಾಸಮಾಡುತ್ತಾನೆ ಎಂದು ವೇದಸಾಹಿತ್ಯದಿಂದ ನಮಗೆ ತಿಳಿದುಬರುತ್ತದೆ. ಅವನು ಆಧ್ಯಾತ್ಮಿಕ ಮತ್ತು ಐಹಿಕ ಜಗತ್ತುಗಳೆರಡರಲ್ಲಿಯೂ ಇದ್ದಾನೆ. ಅವನು ಬಹುದೂರದಲ್ಲಿದ್ದರೂ ನಮ್ಮ ಹತ್ತಿರವಿದ್ದಾನೆ. ಹೀಗೆಂದು ವೇದಸಾಹಿತ್ಯ ಹೇಳುತ್ತದೆ. ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ (ಕಠ ಉಪನಿಷತ್ತು 1.2.21). ಸದಾ ದಿವ್ಯಾನಂದದಲ್ಲಿರುವುದರಿಂದ ಅವನು ತನ್ನ ಪೂರ್ಣಸಿರಿಯನ್ನು ಹೇಗೆ ಸವಿಯುತ್ತಾನೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ. ನಮ್ಮ ಐಹಿಕ ಇಂದ್ರಿಯಗಳಿಂದ ನೋಡುವುದಾಗಲೀ ಅರ್ಥಮಾಡಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಆದುದರಿಂದ ಅವನನ್ನು ಅರ್ಥಮಾಡಿಕೊಳ್ಳಲು ನಮ್ಮ ಐಹಿಕ ಮನಸ್ಸು ಮತ್ತು ಇಂದ್ರಿಯಗಳು ಕೆ...