Bangalore, ಏಪ್ರಿಲ್ 25 -- ಜಗತ್ತಿನ ಅತ್ಯಂತ ಸುಂದರ ಮಹಿಳೆ ಯಾರು? ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ. ಅಮೆರಿಕದ ಡೆಮಿ ಮೋರ್‌ ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದು ಖ್ಯಾತಿ ಪಡೆದಿದ್ದಾರೆ. ಸೌಂದರ್ಯಕ್ಕಾಗಿ ತನ್ನ ದೇಹಕ್ಕೆ ಸಾಕಷ್ಟು ಶಿಕ್ಷೆ, ಹಿಂಸೆ ನೀಡಿದ್ದಾರೆ.

ಈ ಅಮೆರಿಕದ ನಟಿ ಹಲವು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ ಪೀಪಲ್‌ ಮ್ಯಾಗಜಿನ್‌ ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದು ನಟಿಯೊಬ್ಬರನ್ನು ಗುರುತಿಸಿದೆ. ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಬಿರುದು ಪಡೆದ ಈಕೆಗೆ ಈಗ 62 ವರ್ಷ ವಯಸ್ಸು.

ಈಕೆಯ ಹೆಸರು ಡೆಮಿ ಮೋರೆ. ಇವರು ಅಮೆರಿಕದ ನಟಿ. ಈ ಪಟ್ಟ ಪಡೆದ ಅತ್ಯಂತ ಹಿರಿಯ ನಟಿಯೂ ಇವರಾಗಿದ್ದಾರೆ.

ದಿ ಪೀಪಲ್‌ ಮ್ಯಾಗಜಿನ್‌ ಡೆಮಿ ಅವರ ಫೋಟೋವನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿ ಅತ್ಯಂತ ಸುಂದರವಾದ ಮಹಿಳೆ ಎಂದು ಬಿರುದು ನೀಡಿದೆ. ಈಕೆಯ ಸಂದರ್ಶನವನ್ನೂ ಪ್ರಕಟಿಸಲಾಗಿದೆ.

ತನ್ನ ಈ ಸೌಂದರ್ಯಕ್ಕಾಗಿ ಸಾಕಷ್ಟು ಕಷ್...