ಭಾರತ, ಫೆಬ್ರವರಿ 16 -- ನಿತ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಜಗತ್ತಿಗೆ ಅಂತ್ಯವೇ ಇಲ್ಲವಾ? ಖಚಿತವಾಗಿಯೂ ಇದೆ ಎಂದು ಬಲ್ಲವರು ಹೇಳುತ್ತಾರಾದರೂ ಯಾವುದೂ ನಿಖರವಲ್ಲ. ಆದಾಗ್ಯೂ, ಜಗತ್ತಿನ ಅಂತ್ಯ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇಂದು ನಿನ್ನೆಯದಲ್ಲ. ಶತಮಾನಗಳ ಹಿಂದಿನದ್ದು ಎಂಬುದನ್ನು ಖಾತರಿಪಡಿಸುವಂತಹ ವಿಚಾರ ಈಗ ಗಮನಸೆಳೆದಿದೆ. ಹೌದು, ಗಣಿತಜ್ಞ, ವಿಜ್ಞಾನಿ ಸರ್ ಐಸಾಕ್ ನ್ಯೂಟನ್‌ 321 ವರ್ಷ ಹಿಂದೆ ಬರೆದ ಪತ್ರದ ಅಂಶ ಈಗ ವೈರಲ್ ಆಗಿದೆ.

ಗುರುತ್ವಾಕರ್ಷಣೆ ನಿಯಮ ಪ್ರತಿಪಾದಿಸಿದ ಐಸಾಕ್ ನ್ಯೂಟನ್ 1704ರಲ್ಲಿ ಬರೆದಿದ್ದ ಪತ್ರದ ಅಂಶವನ್ನು ನ್ಯೂಯಾರ್ಕ್‌ ಪೋಸ್ಟ್ ಮತ್ತೆ ನೆನಪಿಸಿದೆ. ಕುತೂಹಲಕಾರಿ ಅಂಶ ಎಂದರೆ, ಈ ಪತ್ರದಲ್ಲಿ ನ್ಯೂಟನ್ ಅವರು ಜಗತ್ತು "ಅಂತ್ಯ"ವಾಗುತ್ತದೆ ಎಂದು ಬರೆದಿಲ್ಲ. ಬದಲಾಗಿ, ವಿಶ್ವ ಮರು ಹೊಂದಿಕೆ ಮಾಡಿಕೊಳ್ಳುತ್ತದೆ (ರೀಸೆಟ್‌ ಆಗುತ್ತದೆ) ಎಂದು ಬರೆದುಕೊಂಡಿದ್ದಾರೆ. 1000 ವರ್ಷಗಳ ಜಾಗತಿಕ ಶಾಂತಿಯ ಸಾಮ್ರಾಜ್ಯವನ್ನು ಪುನಸ್ಥಾಪಿಸಲು ಕ್ರಿಸ್ತ ಮತ್ತು ಸಂತರು ...