ಭಾರತ, ಏಪ್ರಿಲ್ 10 -- ಜಪಾನ್‌ನ ಪಶ್ಚಿಮ ಜಪಾನ್ ರೈಲ್ವೆ ಕಂಪನಿ ವಿಶ್ವಾದ್ಯಂತ ರೈಲ್ವೆ ನಿರ್ಮಾಣದ ದಿಕ್ಕನ್ನು ಬದಲಾಯಿಸಬಲ್ಲ ಕೆಲಸವನ್ನು ಮಾಡಿ ಗಮನಸೆಳೆದಿದೆ. ಸಮಯ ಉಳಿತಾಯ, ವೆಚ್ಚ ಕಡಿತ ಮತ್ತು ತಂತ್ರಜ್ಞಾನದ ಅಪಾರ ಬಳಕೆಯೊಂದಿಗೆ ವಿಶ್ವದ ಮೊದಲ 3D ಮುದ್ರಿತ ರೈಲ್ವೆ ನಿಲ್ದಾಣವನ್ನು ಜಪಾನ್‌ನಲ್ಲಿ ನಿರ್ಮಿಸಲಾಗಿದೆ.

ಜಪಾನ್‌ನ ಆರಿಡಾ ನಗರದಲ್ಲಿರುವ "ಹ್ಯಾಟ್ಸುಶಿಮಾ ಸ್ಟೇಷನ್" ಅನ್ನು 3D ಮುದ್ರಿತ ಭಾಗಗಳಿಂದ ತಯಾರಿಸುವ ಸಂದರ್ಭದಲ್ಲಿ ತೆಗೆದ ಚಿತ್ರ.

ಕೊನೆಯ ರೈಲು ರಾತ್ರಿ 11:57 ಕ್ಕೆ ಹೊರಟುಹೋದ ಬಳಿಕ ರೈಲ್ವೆ ನಿಲ್ದಾಣ ನಿರ್ಮಾಣದ ಕೆಲಸ ಪ್ರಾರಂಭವಾಯಿತು. ನಿಲ್ದಾಣವನ್ನು ಕೇವಲ 6 ಗಂಟೆಗಳಲ್ಲಿ ನಿರ್ಮಿಸಲಾಗಿದೆ. ಹೊಸ ನಿಲ್ದಾಣದಲ್ಲಿ ಮೊದಲ ರೈಲು ಬೆಳಿಗ್ಗೆ 5:45 ಕ್ಕೆ ಬಂದು ನಿಂತಿತು.

1948ರಲ್ಲಿ ನಿರ್ಮಿಸಲಾಗಿದ್ದ ಹಳೆಯ ಮರದ ರೈಲ್ವೆ ನಿಲ್ದಾಣದ ಜಾಗದಲ್ಲಿ ಈಗ. 3D ರೈಲ್ವೆ ನಿರ್ಮಾಣವಾಗಿದೆ. ಸೆರೆಂಡಿಕ್ಸ್ ಎಂಬ ನಿರ್ಮಾಣ ಸಂಸ್ಥೆ ಈ ಕಾರ್ಯ ಮಾಡಿದ್ದು,, ಇದು ಸುಧಾರಿತ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ. ...