ಭಾರತ, ಫೆಬ್ರವರಿ 18 -- Chhaava: ವಿಕಿ ಕೌಶಾಲ್ ಹಾಗೂ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಸಿನಿಮಾ ಛಾವಾ ಗಲ್ಲಾ ಪೆಟ್ಟಿಗೆ ದೋಚುತ್ತಿದ್ದು, ಪ್ರೇಕ್ಷಕರು ಫಿದಾ ಆಗಿದ್ದಾರೆ. ಒಂದೇ ವಾರದಲ್ಲಿ 200 ಕೋಟಿ ರೂಪಾಯಿ ಕ್ಲಬ್ ಸೇರ್ಪಡೆಯಾಗುವತ್ತ ಮುನ್ನುಗ್ಗುತ್ತಿರುವ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕು ಎಂದು ಆಗ್ರಹಿಸಿ ಮುಂಬಯಿ ಡಬ್ಬಾವಾಲಗಳು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಛಾವಾ ಸಿನಿಮಾ ಚಾರಿತ್ರಿಕವಾಗಿ ಮಹತ್ವ ಪಡೆದಿರುವಂಥದ್ದು. ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಐತಿಹಾಸಿಕ ಕಥಾ ಹಂದರ ಇರುವಂಥ ಸಿನಿಮಾ ಆಗಿರುವ ಕಾರಣ, ಅದನ್ನು ತೆರಿಗೆ ಮುಕ್ತಗೊಳಿಸಬೇಕು ಎಂಬುದು ಮುಂಬಯಿ ಡಬ್ಬಾವಾಲಾಗಳ ಆಗ್ರಹ. ಸಂಭಾಜಿ ಮಹಾರಾಜರ ಜತೆಗೆ ಇದ್ದು ಹೋರಾಟ ನಡೆಸಿದವರು ನಮ್ಮ ಪೂರ್ವಜರು. ಹಾಗಾಗಿ ಛಾವಾ ಸಿನಿಮಾ ತಮಗೆ ಅತ್ಯಂತ ಆಪ್ತವಾದುದು ಎಂದು ಡಬ್ಬಾವಾಲಾಗಳ ಸಂಘದ ಅಧ್ಯಕ್ಷ ಸುಭಾಷ್ ತಲೇಕರ್ ಹೇಳಿಕೊಂಡಿದ್ದಾರೆ.

ಛಾವಾ ಸಿನಿಮಾವನ್ನು ರಾಜ್ಯದಲ್ಲಿ...