ಭಾರತ, ಫೆಬ್ರವರಿ 19 -- Akshay Khanna Acting:ಇತ್ತೀಚಿಗೆ ಬಿಡುಗಡೆಯಾದ ಸಿನಿಮಾ 'ಛಾವಾ'ದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಾ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಹಾಗೂ ಕಲಾವಿದರ ಅಭಿನಯ ಎಲ್ಲವೂ ಉತ್ತಮವಾಗಿದೆ ಎಂದು ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಗಲ್ಲಾಪೆಟ್ಟಿಯಲ್ಲೂ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಇದರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುಮುಖ ಪ್ರತಿಭೆ ಅಕ್ಷಯ್ ಖನ್ನಾ ಅಭಿಮಾನಿಗಳಿಂದ ಅಪಾರ ಪ್ರೀತಿಯನ್ನು ಪಡೆಯುತ್ತಿದ್ದಾರೆ.

X ಬಳಕೆದಾರರು ಅಕ್ಷಯ್ ಖನ್ನಾ ಅಭಿನಯವನ್ನು ಹೊಗಳುತ್ತಿದ್ದಾರೆ. "ಕೆಲವು ನಟರು ಆನುವಂಶಿಕವಾಗಿ ಪ್ರತಿಭಾನ್ವಿತರಾಗಿರುತ್ತಾರೆ ಅಂತವರಲ್ಲಿ ಅಕ್ಷಯ್ ಖನ್ನಾ ಕೂಡ ಒಬ್ಬರು ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಚಲನಚಿತ್ರಗಳಲ್ಲಿ ಹೆಚ್ಚಾಗಿ ನೋಡಲು ಬಯಸುವ ನಟ ಅವರು" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು...