ಭಾರತ, ಏಪ್ರಿಲ್ 15 -- ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ ಆಗಿದ್ದ ಬ್ರೋ ಗೌಡ ಅಲಿಯಾಸ್ ಶಮಂತ್ ಗೌಡ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೈಷ್ಣವ್ ಪಾತ್ರದ ಮೂಲಕ ಕನ್ನಡಿಗರ ಮನೆ ಮನಗಳಿಗೆ ಹತ್ತಿರವಾಗುತ್ತಾರೆ. ಸುಮಾರು 2 ವರ್ಷಗಳ ಕಾಲ ವೈಷ್ಣವ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಮಂತ್‌.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬ್ರೋ ಗೌಡ ಅವರ ಚೊಚ್ಚಲ ಧಾರಾವಾಹಿಯಾಗಿತ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು ಶಮಂತ್‌. ಮೊದಲ ಧಾರಾವಾಹಿಯೇ ಅವರ ಅದೃಷ್ಟ ಬದಲಿಸಿದಂತಿದೆ. ಅವರು ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ನಾಯಕನಾಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ.

ಶಮಂತ್ ಯಾವ ಚಾನೆಲ್‌ನ, ಯಾವ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶಮಂತ್ ಗೌಡ ತೆಲುಗು ಧಾರಾವಾಹಿಯೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನು ಬ್ರೋ ಗೌಡ ಕೂಡ ತಮ್ಮ ಇ...