ಭಾರತ, ಮೇ 8 -- ಬಿಗ್‌ ಬಾಸ್‌ ಚೈತ್ರಾ ಕುಂದಾಪುರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇನ್ನೇನು ಮೇ 9ರಂದು ಪ್ರೀತಿಸಿದ ಹುಡುಗನನ್ನು ವರಿಸಲಿದ್ದಾರವರು.

ಅಂದಹಾಗೆ, ಯಾವುದೇ ಆಡಂಬರ ಇಲ್ಲದೆ, ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಚೈತ್ರಾ ಅವರ ಮದುವೆ ನೆರವೇರಲಿದೆ. 12 ವರ್ಷಗಳಿಂದ ಸ್ನೇಹಿತನಾಗಿದ್ದವನ ಜತೆಗೆ ಬಾಳ ಬಂಧಕ್ಕೆ ಕಾಲಿರಿಸುತ್ತಿದ್ದಾರೆ.

ಆ ವರ ಯಾರು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಹೊರಬಿದಿಲ್ಲ. ಇನ್ನೇನು ನಾಳೆ (ಮೇ. 9) ಆ ಕುತೂಹಲಕ್ಕೆ ತೆರೆ ಬೀಳಲಿದೆ. ಚೈತ್ರಾ ಅವರನ್ನು ವರಿಸಿದ ಗಂಡು ಯಾರ ಎಂಬುದು ರಿವೀಲ್‌ ಆಗಲಿದೆ.

ಈಗಾಗಲೇ ಕುಂದಾಪುರದ ಮನೆಯಲ್ಲಿ ವಿವಾಹ ಪೂರ್ವ ಆಚರಣೆಗಳು ಶುರುವಾಗಿದ್ದು, ಮದರಂಗಿ ಶಾಸ್ತ್ರದ ಕಿರು ವಿಡಿಯೋ ತುಣುಕನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಚೈತ್ರಾ. ಜತೆಗೆ ಸುದೀರ್ಘ ಬರಹವನ್ನೂ ಬರೆದುಕೊಂಡಿದ್ದಾರೆ. ಅದು ಹೀಗಿದೆ.

"ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿ...