ಭಾರತ, ಫೆಬ್ರವರಿ 2 -- ಕಳೆದ ವರ್ಷದ (2024) ಡಿಸೆಂಬರ್‌ನಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲುವಿನ ನಂತರ ಭಾರತದ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಡಿ ಗುಕೇಶ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಶನಿವಾರ (ಫೆ.1) ಜೋರ್ಡೆನ್ ವ್ಯಾನ್ ಫೋರ್ಸ್ಟ್ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ಡ್ರಾ ಸಾಧಿಸಿದ ಅವರು, ಆರ್ ಪ್ರಜ್ಞಾನಂದ ಅವರೊಂದಿಗೆ ಮುನ್ನಡೆಯನ್ನು ಹಂಚಿಕೊಂಡಿದ್ದಾರೆ. ಶನಿವಾರ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಪಂದ್ಯದ ನಂತರ‌ ಲೈವ್ ಎಲೋ ರೇಟಿಂಗ್ಸ್‌ನಲ್ಲಿ ಗುಕೇಶ್ ಮೂರನೇ ಸ್ಥಾನಕ್ಕೆ ಏರಿದ್ದಾರೆ.

ಗುಕೇಶ್‌ ಈಗ 2791.9 ರೇಟಿಂಗ್‌ನೊಂದಿಗೆ ವಿಶ್ವದಲ್ಲೇ 3ನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಹಿಕಾರು ನಕಮುರಾ (2802) ಮತ್ತು ಅಗ್ರಸ್ಥಾನದಲ್ಲಿರುವ ಮ್ಯಾಗ್ನಸ್ ಕಾರ್ಲ್ಸನ್ (2833) ನಂತರದ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಫ್ಯಾಬಿಯಾನೊ ಕರುವಾನಾ 2790.2 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ. ನೊಡಿರ್ಬೆಕ್ ಅಬ್ದುಸಾಟೊರೊವ್ (2774), ಅರ್ಜುನ್ ಎರಿಗೈಸಿ (2772), ಪ್ರಜ್ಞಾನಂದ (...