ಬೆಂಗಳೂರು, ಮಾರ್ಚ್ 5 -- ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್​ಗಳಿಂದ ಜಯಿಸಿದ ಭಾರತ, ಸತತ 3ನೇ ಬಾರಿಗೆ ಹಾಗೂ ಒಟ್ಟಾರೆ ಐದನೇ ಸಲ ಚಾಂಪಿಯನ್ಸ್ ಟ್ರೋಫಿ ಫೈನಲ್​ ಪ್ರವೇಶಿಸಿದೆ. ಅಲ್ಲದೆ, ಕಳೆದ ನಾಲ್ಕು ಐಸಿಸಿ ಟೂರ್ನಿಗಳ ಫೈನಲ್​ ಪ್ರವೇಶಿಸಿದ ವಿಶ್ವದ ಮೊದಲ ತಂಡ ಭಾರತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರಶಸ್ತಿ ಸುತ್ತಿಗೇರಿರುವ ಖುಷಿಯಲ್ಲಿರುವ ವಿರಾಟ್ ಕೊಹ್ಲಿ-ರೋಹಿತ್​ ಶರ್ಮಾ ಅವರು ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಕುಲ್ದೀಪ್ ಯಾದವ್ ವಿರುದ್ಧ ಸಿಡಿಮಿಡಿಗೊಂಡಿದ್ದರು.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದ 32ನೇ ಓವರ್​ಗಳಲ್ಲಿ ಕುಲ್ದೀಪ್ ಯಾದವ್ ತೋರಿದ ನಿರ್ಲಕ್ಷ್ಯಕ್ಕೆ ಕೊಹ್ಲಿ-ರೋಹಿತ್​ ಕೋಪಗೊಂಡಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ರೋ-ಕೋ ಕೋಪಗೊಂಡಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣುತ್ತದೆ. 8 ...