Bengaluru, ಮಾರ್ಚ್ 24 -- ಟ್ರೆಂಡಿ ಸ್ಲೀವ್ಸ್ ವಿನ್ಯಾಸ: ಕುರ್ತಿಗೆ ಸುಂದರ ಮತ್ತು ಸ್ಟೈಲಿಶ್ ಲುಕ್ ನೀಡಲು, ನೆಕ್ ಡಿಸೈನ್ ಜೊತೆಗೆ ತೋಳುಗಳ ಬಗ್ಗೆಯೂ ಗಮನ ಹರಿಸುವುದು ಬಹಳ ಮುಖ್ಯ. ಚೂಡಿದಾರ್ ಧರಿಸುವಾಗ ಸ್ಟೈಲಿಶ್ ಲುಕ್ ಬಯಸಿದರೆ, ನಿಮ್ಮ ಕುರ್ತಿಯ ತೋಳುಗಳನ್ನು ತಯಾರಿಸುವಾಗ, ಖಂಡಿತವಾಗಿಯೂ ಈ ಟ್ರೆಂಡಿ ತೋಳು ವಿನ್ಯಾಸಗಳನ್ನು ನೋಡಿ. 8 ಟ್ರೆಂಡಿ ತೋಳುಗಳ ವಿನ್ಯಾಸಗಳು ಇಲ್ಲಿವೆ.

ಬಟರ್‌ಫ್ಲೈ (ಚಿಟ್ಟೆ) ತೋಳುಗಳು ಕುರ್ತಾ ಅಥವಾ ಚೂಡಿದಾರ್‌ಗೆ ಸರಳ ರೀತಿಯಲ್ಲಿ ಅಲಂಕಾರಿಕ ನೋಟವನ್ನು ನೀಡಬಹುದು. ಈ ರೀತಿಯ ತೋಳುಗಳನ್ನು ತಯಾರಿಸಲು ಆರ್ಗನ್ಜಾ ಅಥವಾ ನೆಟೆಡ್ ಉಡುಪನ್ನು ಬಳಸಬಹುದು.

ತೆಳುವಾದ ಲೇಸ್‌ ಮತ್ತು ಗುಂಡಿ (ಬಟನ್): ಸರಳ ಕುರ್ತಿಗೆ ಈ ತೋಳುಗಳ ಮಾದರಿಯನ್ನು ಆರಿಸಿಕೊಳ್ಳಿ. ಈ ಸರಳ ವಿನ್ಯಾಸವು ತೆಳುವಾದ ಲೇಸ್ ಮತ್ತು ಬಟ್ಟೆಯ ಗುಂಡಿಯನ್ನು ಹೊಂದಿದೆ.

ಬಲೂನ್ ತೋಳುಗಳು: ಕೈಗಳು ತುಂಬಾ ತೆಳ್ಳಗಿದ್ದರೆ ಬಲೂನ್ ತೋಳುಗಳ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಈ ರೀತಿಯ ವಿನ್ಯಾಸದಲ್ಲಿ ತೋಳುಗಳು ತುಂಬಾ ತೆಳ್ಳಗೆ ಕಾಣು...