ಭಾರತ, ಮೇ 13 -- ಭಾರತೀಯ ಹೆಣ್ಣುಮಕ್ಕಳ ವಾರ್ಡ್‌ರೋಬ್‌ನಲ್ಲಿ ಚೂಡಿದಾರ್‌ ಅಥವಾ ಸೂಟ್‌ಗೆ ಸ್ಥಾನ ಇದ್ದೇ ಇರುತ್ತದೆ. ಈ ಡ್ರೆಸ್‌ಗಳನ್ನು ಪ್ರತಿಯೊಂದು ವಿಶೇಷ ಸಂದರ್ಭಕ್ಕೂ ಹಾಗೂ ದೈನಂದಿನ ಬಳಕೆಗೂ ತೊಡಬಹುದು. ಚೂಡಿದಾರ್‌ ಹೊಲಿಸಲು ಚೆಂದದ ಬಟ್ಟೆ ಖರೀದಿಸುವುದು ಮಾತ್ರವಲ್ಲ, ಅದಕ್ಕೆ ತಕ್ಕಂತೆ ನೆಕ್‌ ಡಿಸೈನ್‌, ಸ್ಲೀವ್‌ ಡಿಸೈನ್‌ ಮಾಡಿಸುವುದು ಕೂಡ ಮುಖ್ಯವಾಗುತ್ತದೆ. ನೀವು ಚೂಡಿದಾರ್‌ ಹೊಲಿಸಬೇಕು ಅಂತಿದ್ದರೆ ಫ್ರಂಟ್‌ ಅಂಡ್‌ ಬ್ಯಾಕ್‌ ಈ ರೀತಿ ನೆಕ್‌ ಡಿಸೈನ್‌ ಮಾಡಿಸಿ. ಈ ಡ್ರೆಸ್‌ನಿಂದ ನಿಮ್ಮ ಲುಕ್ಕೇ ಬದಲಾಗುತ್ತೆ.

ನಿಮ್ಮ ಸೂಟ್‌ಗೆ ಗ್ಲಾಮರಸ್ ಲುಕ್ ನೀಡಲು ಬಯಸಿದರೆ, ನೀವು ಈ ರೀತಿ ಡೀಪ್‌ ಸ್ವೀಟ್‌ಹಾರ್ಟ್ ನೆಕ್‌ಲೈನ್ ಅನ್ನು ಆಯ್ಕೆ ಮಾಡಬಹುದು. ಇದು ನೋಡಲು ತುಂಬಾ ಅಲಂಕಾರಿಕವಾಗಿ ಕಾಣುತ್ತದೆ. ವಿಶೇಷವಾಗಿ ನೀವು ನೆಟ್ ಅಥವಾ ಯಾವುದೇ ಪಾರದರ್ಶಕ ಬಟ್ಟೆಯಿಂದ ಚೂಡಿದಾರ್‌ ಹೊಲಿಸುತ್ತಿದ್ದರೆ ಈ ರೀತಿಯ ಕಂಠರೇಖೆಯು ಚೆನ್ನಾಗಿ ಹೊಂದುತ್ತದೆ.

ಚೂಡಿದಾರ್‌ಗೆ ಆಧುನಿಕ ಸ್ಪರ್ಶ ನೀಡಲು ಈ ಆಫ್ ಶೋಲ್ಡರ್ ವಿನ್ಯಾಸ ಸಖ...