ಭಾರತ, ಏಪ್ರಿಲ್ 24 -- ಇಲ್ಲಿ ಎರಡು ಆಯಾಮ ಮಾತ್ರ ಬರೆದಿದ್ದೇನೆ. ಇನ್ನೊಂದು ಆಯಾಮ ಹೇಳುವಂತಿಲ್ಲ. ಬುದ್ದಿವಂತ ಓದುಗರು ಊಹಿಸಿಕೊಳ್ಳ ಬಹುದು. ಸುಂಕ ಸಮರವನ್ನು ಅಮೇರಿಕಾ ಶುರು ಮಾಡಿತು. ಆದರೆ ಅದು ಅಮೆರಿಕಕ್ಕೆ ತಿರುಗುಬಾಣವಾಗುತ್ತದೆ ಎನ್ನುವ ಅರಿವು ಟ್ರಂಪ್ ಗೆ ಇರಲಿಲ್ಲವೇ ? ಎನ್ನುವುದು ಬಹು ದೊಡ್ಡ ಪ್ರಶ್ನೆ. ನಾನು ವಿಶ್ವಕ್ಕೆ ಇನ್ನೂ ದೊಡ್ಡಣ್ಣ ಎನ್ನುವ ಗತ್ತಿನಿಂದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಮ್ಮುಖ ನಿರ್ಧಾರ ತೆಗೆದುಕೊಂಡದ್ದು ಇದೀಗ ಅಮೇರಿಕಾ ಬಹು ದೊಡ್ಡ ಕುಸಿತದ ಹಂತಕ್ಕೆ ಬಂದು ನಿಂತಿದೆ. ಕೇವಲ ವಾರದ ಹಿಂದೆ ಚೀನಾದಿಂದ ಹೊರಟ ೮೦ ಶಿಪ್ಪಿಂಗ್ ಕಂಟೈನರ್ ತೆರೆದಾಗ ಅದು ಖಾಲಿ ಇದ್ದದ್ದು ಅಮೇರಿಕಾ ವ್ಯಾಪಾರಸ್ಥರ ಜಂಘಾಬಲವನ್ನು ಹುಡುಗಿಸಿದೆ. ಚೀನಾ ,ಸಾಕು ಇನ್ನು ಅಮೇರಿಕಾ ಜೊತೆಗೆ ವ್ಯಾಪಾರ ಬೇಡ ಎಂದು ಮನಸ್ಸು ಮಾಡಿದರೆ ಏನಾಗಬಹುದು ಎನ್ನುವುದನ್ನು ಸ್ವಲ್ಪ ಗಮನಿಸೋಣ.

ಚೀನಾ ತನ್ನ ವಸ್ತುಗಳನ್ನು ಅಮೆರಿಕಾಗೆ ಕಳಿಸುವುದಿಲ್ಲ ಎಂದು ಹಠ ಮಾಡಿಕೊಂಡು ಕುಳಿತರೆ ಅಮೆರಿಕಾದ ದೊಡ್ಡ ಸೂಪರ್ಮಾರ್ಕೆಟ್ ಚೈನ್ ...