ಭಾರತ, ಮೇ 14 -- ಇತ್ತೀಚೆಗೆ ಪಾಸ್‌ಪೋರ್ಟ್ ಡೇಟಾ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆ ಅದನ್ನು ತಪ್ಪಿಸುವ ಮತ್ತು ಭದ್ರತೆ ಒದಗಿಸುವ ಸಲುವಾಗಿ ಇ-ಪಾಸ್‌ಪೋರ್ಟ್ ಅನ್ನು ಭಾರತ ಸರ್ಕಾರ ಪರಿಚಯಿಸಿದೆ. ಹೈಟೆಕ್ ಟಚ್ನೊಂದಿಗೆ ಇ-ಪಾಸ್ಪೋರ್ಟ್ಗಳು ಸಾಂಪ್ರದಾಯಿಕ ಕಾಗದದ ಪಾಸ್ಪೋರ್ಟ್ಗಳನ್ನು ಆಧುನಿಕ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಜೊತೆಗೆ ಸಂಯೋಜಿಸುತ್ತವೆ.
2024ರ ಏಪ್ರಿಲ್ 1ರಂದು ಪ್ರಾರಂಭವಾದ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ 2.0 ಆವೃತ್ತಿಯ ಅಡಿಯ ಜೊತೆಗೆ ಪ್ರಾಯೋಗಿಕ ಕಾರ್ಯಕ್ರಮವಾಗಿ ಇ-ಪಾಸ್‌ಪೋರ್ಟ್ ಉಪಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ರಸ್ತುತ, ಕೆಲವೇ ನಗರಗಳು ಇ-ಪಾಸ್‌ಪೋರ್ಟ್ ಸೇವೆ ಒದಗಿಸುತ್ತಿವೆ. ಮುಂಬರುವ ದಿನಗಳಲ್ಲಿ ಭಾರತದ ನಗರಗಳಿಗೆ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಇ-ಪಾಸ್‌ಪೋರ್ಟ್ ಎಂಬುದು ಕಾಗದ ಮತ್ತು ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್‌ನ ಸಂಯೋಜಿತ ಆವೃತ್ತಿಯಾಗಿದೆ. ಇದು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.