ಭಾರತ, ಮಾರ್ಚ್ 17 -- Ranya Rao Gold Smuggling: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ (ಹರ್ಷವರ್ಧಿನಿ) ಮತ್ತು ಆಕೆಯ ಸ್ನೇಹಿತ ತರುಣ್ ರಾಜು ಚಿನ್ನ ಖರೀದಿ ಮತ್ತು ಮಾರಾಟ (ಆಮದು/ರಫ್ತು) ಮಾಡುವುದಕ್ಕಾಗಿ ದುಬೈನಲ್ಲಿ ಗೋಲ್ಡ್ ಕಂಪನಿ ತೆರೆದಿದ್ದಾರೆ. ಚಿನ್ನ ಪೂರೈಕೆದಾರರು ಕೂಡ ಇವರನ್ನು ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂಬುದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರೂ ಕಾಲೇಜು ದಿನಗಳಿಂದಲೇ ಸ್ನೇಹಿತರು. ಇಬ್ಬರೂ ಸೇರಿ ದುಬೈನಲ್ಲಿ ಚಿನ್ನ ಖರೀದಿ ಮತ್ತು ಮಾರಾಟ (ಆಮದು/ರಫ್ತು) ಕ್ಕಾಗಿ ಗೋಲ್ಡ್ ಕಂಪನಿ ಶುರುಮಾಡಿದ್ದರು. ಇದರಲ್ಲಿ ರನ್ಯಾ ರಾವ್ ಅವರದ್ದೇ ಹೆಚ್ಚು ಹೂಡಿಕೆ. ಒಮ್ಮೆ ಚಿನ್ನ ಪೂರೈಕೆದಾರರು ಇವರ ಕಂಪನಿಗೆ 1.7 ಕೋಟಿ ರೂಪಾಯಿ ವಂಚಿಸಿದ ವೇಳೆ, ರನ್ಯಾ ರಾವ್ ಅವರು ಈ ನಷ್ಟ ಸರಿದೂಗಿಸುವುದಕ್ಕೆ ಭಾರತದಿಂದ ದುಬೈಗೆ ಹವಾಲಾ ಮೂಲಕ ಹಣ ತಲುಪಿಸಿದ್ದ...