ಭಾರತ, ಏಪ್ರಿಲ್ 22 -- ಬೆಂಗಳೂರು: ದುಬೈ ನಿಂದ ಚಿನ್ನವನ್ನು ಕಳ್ಳ ಸಾಗಾಣೆ ಮಾಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಚಿತ್ರನಟಿ ರನ್ಯಾ ರಾವ್‌ ಅವರಿಗೂ 2 ನೇ ಆರೋಪಿ ತರುಣ್‌ ಕೊಂಡೂರು ರಾಜು ಮತ್ತು 3 ನೇ ಆರೋಪಿ ಬಳ್ಳಾರಿ ಮೂಲದ ಅಮೆರಿಕ ದೇಶದ ಪ್ರಜೆ ಚಿನ್ನಾಭರಣ ವ್ಯಾಪಾರಿ ಸಾಹಿಲ್‌ ಸಕಾರಿಯಾ ಜೈ ಅವರಿಗೂ ಸಂಬಂಧ ಇದೆ ಎನ್ನುವುದನ್ನು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸಾಬೀತುಪಡಿಸಿದೆ. ಈ ಸಂಬಂಧ ರನ್ಯಾ ಅವರ ಮೊಬೈಲ್‌ ಮತ್ತು ಲ್ಯಾಪ್‌ ಟಾಪ್‌ ಅನ್ನು ವಿಶ್ಲೇಷಿಸಿ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯನ್ನೂ ಹೈಕೋರ್ಟ್‌ ಗಮನಕ್ಕೆ ನೀಡಿದೆ.

ತನಿಖೆಯ ಸಂದರ್ಭದಲ್ಲಿ ಕಂಡು ಬಂದ ಸ್ಫೋಟಕ ಮಾಹಿತಿಗಳನ್ನು ಕುರಿತು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಮಯಾವಕಾಶ ನೀಡುವಂತೆಯೂ ಹೈಕೋರ್ಟ್‌ ಗೆ ಮನವಿ ಸಲ್ಲಿಸಿದೆ. ಸೋಮವಾರ ನ್ಯಾಯಮೂರ್ತಿ ಎಸ್.‌ ವಿಶ್ವನಾಥ್‌ ಅವರು ರನ್ಯಾ ರಾವ್‌ ಮತ್ತು ತರುಣ್‌ ಕೊಂಡೂರು ರಾಜು ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಮಂಗಳವಾರಕ್ಕೆ ಮುಂದ...