ಭಾರತ, ಮಾರ್ಚ್ 12 -- Gold Smuggling Case: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಿತ್ರ ನಟಿ ರನ್ಯಾ ರಾವ್ ಬಂಧನವಾಗಿದ್ದು, ಡಿಆರ್‌ ಐ ಹಾಗೂ ಸಿಬಿಐ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿವೆ. ಮತ್ತೊಂದು ಕಡೆ ರನ್ಯಾ ಅವರ ಮಲತಂದೆ ಡಿಐಜಿ ರಾಮಚಂದ್ರರಾವ್ ಅವರ ಪ್ರಭಾವ ಕುರಿತು ತನಿಖೆ ನಡೆಸಲು ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ನೇಮಿಸಲಾಗಿದೆ. ಈ ರನ್ಯಾರಾವ್ ವಿಮನ ನಿಲ್ದಾಣದಿಂದ ಸುಲಭವಾಗಿ ಯಾವುದೇ ತಪಾಸಣೆ ಇಲ್ಲದೆ ಹೊರಬರುತ್ತಿದ್ದರು. ಈ ಪ್ರಕರಣದಲ್ಲಿ ಪೊಲೀಸರ ಲೋಪ ಕುರಿತು ತನಿಖೆ ನಡೆಸಲು ಸಿಐಡಿಗೆ ವಹಿಸಲಾಗಿದೆ. ಈ ಮಧ್ಯೆ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ತಾತ್ಕಾಲಿಕವಾಗಿ ಬಂಧನದಿಂದ ಪಾರಾಗಿದ್ದಾರೆ.

ಬಂಧನದ ಭೀತಿಯಿಂದ ಜತಿನ್ ಹುಕ್ಕೇರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸುವಂತಿಲ್ಲ ಎಂದು ಇಂದು ಮಹತ್ವದ ಆದೇಶ ನೀಡಿದೆ.

ಪತ್ನಿ ರನ್ಯಾ ಮೇಲಿನ ಆರೋಪಕ್ಕೂ ಜತಿನ್ ಅವರಿಗೂ ಸಂಬಂಧವಿಲ್ಲ. ಡಿಆರ್‌ಐ ಅಧಿಕಾರಿಗಳು ಸಮನ್ಸ್...