ಭಾರತ, ಏಪ್ರಿಲ್ 26 -- ರನ್ಯಾ ರಾವ್ ವಿರುದ್ಧ ಕಾಫಿಫೋಸಾ: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರನ್ಯಾ ರಾವ್ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) 'ಕಾಫಿಪೋಸಾ' ಕಾಯ್ದೆ ಅಡಿ ಬಂಧನದ ಆದೇಶ ಹೊರಡಿಸಿದೆ. ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್‌ ಅಡಿಯಲ್ಲಿ ರನ್ಯಾ ವಿರುದ್ಧ ಸಿಇಐಬಿ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್‌ ಏಪ್ರಿಲ್‌ 22ರಂದು ಬಂಧನ ಆದೇಶ ಹೊರಡಿಸಿದ್ದಾರೆ.

ಚಿನ್ನ ಕಳ್ಳಸಾಗಣೆ ಮತ್ತು ಇತರ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿ ಕೊಂಡ ಆರೋಪ ಎದುರಿಸುತ್ತಿರುವ ವ್ಯಕ್ತಿಗಳನ್ನು ಕಾಫಿಪೋಸಾ ಕಾಯ್ದೆ ಪ್ರಕಾರ ಬಂಧಿಸಲಾಗುತ್ತದೆ. ಈ ರೀತಿ ಬಂಧಿತರಾದವರನ್ನು ಕನಿಷ್ಠ 3 ತಿಂಗಳಿಂದ 1 ವರ್ಷದವರೆಗೂ ಸೆರೆವಾಸದಲ್ಲಿ ಇರಿಸಬಹುದು. ತೀರಾ ಗಂಭೀರ ಪ್ರಕರಣ ಎಂದು ದೃಢೀಕರಿಸಲ್ಪಟ್ಟರೆ ಬಂಧಿತರ ಸೆರೆವಾಸವನ್ನು 2 ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ.

ಕಾಫಿಪೋಸಾ ಕಾ...