ಭಾರತ, ಮಾರ್ಚ್ 5 -- Ranya Rao arrested: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಮಾಣಿಕ್ಯ, ಪಟಾಕಿ ಚಿತ್ರಗಳ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರ ಬಂಧನವಾಗಿದೆ. ಕಂದಾಯ ಗುಪ್ತ ಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಅವರನ್ನು ದುಬೈನಿಂದ ಚಿನ್ನಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಕಾರಣ, ಚಿನ್ನ ಸಹಿತ ಬಂಧಿಸಿದ್ದಾರೆ. ಸೋಮವಾರ (ಮಾರ್ಚ್‌ 3) ರಾತ್ರಿ ಎಮಿರೆಟ್ಸ್‌ ಏರ್‌ಲೈನ್ಸ್‌ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿತ್ತು. ವಿಚಾರಣೆಯ ನಂತರ ನಟಿಯನ್ನು ಬಂಧಿಸಿದ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಡಿಆರ್‌ಐ ಕಚೇರಿಗೆ ಕರೆದೊಯ್ದರು.

ದುಬೈನಿಂದ ಸೋಮವಾರ (ಮಾರ್ಚ್‌ 3) ರಾತ್ರಿ ಎಮಿರೆಟ್ಸ್‌ ಏರ್‌ಲೈನ್ಸ್‌ ವಿಮಾನದಲ್ಲಿ ಬಂದ ರನ್ಯಾ ರಾವ್ ಅವರ ಬಳಿ 14.80 ಕಿಲೋ ಚಿನ್ನ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆ ವೇಳೆ ರನ್ಯಾ ರಾವ್ ಅವರು, ತಾನು ಡಿಐಜಿ ಡಾ.ಕೆ.ರಾಮಚಂದ್ರ ...