ಭಾರತ, ಮಾರ್ಚ್ 18 -- ನವದೆಹಲಿ: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಬೆನ್ನಿಗೆ ಹಲವು ಕೇಸ್‌ಗಳಾಗಿದ್ದು, ಇದೀಗ ದೊಡ್ಡ ಮೊತ್ತದ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣ ವಶವಾಗಿರುವುದು ಗಮನಸೆಳೆದಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ಗುಜರಾತ್‌ ಉಗ್ರ ನಿಗ್ರಹ ತಂಡ (ಗುಜರಾತ್ ಎಟಿಎಸ್‌) ಜಂಟಿಯಾಗಿ ಶೋಧ ನಡೆಸಿ ದೊಡ್ಡ ಪ್ರಮಾಣದ ಚಿನ್ನದ ಗಟ್ಟಿ ಹಾಗೂ ಚಿನ್ನಾಭರಣ ವಶಪಡಿಸಿದೆ. ಅಹಮದಾಬಾದ್‌ನ ಪಾಲ್ಡಿಯಲ್ಲಿರುವ ಪ್ಲ್ಯಾಟ್‌ನಲ್ಲಿ ಮಾರ್ಚ್ 17 ರಂದು ಶೋಧ ನಡೆಸಿದಾಗ, ಅಲ್ಲಿ ಅಂದಾಜು 80 ಕೋಟಿ ರೂಪಾಯಿ ಮೌಲ್ಯದ 87.92 ಕಿಲೋ ಚಿನ್ನದ ಗಟ್ಟಿ ಪತ್ತೆಯಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆ ನೀಡಿದೆ.

ಅಹಮದಾಬಾದ್‌ನ ಪಾಲ್ಡಿಯಲ್ಲಿರುವ ಪ್ಲ್ಯಾಟ್‌ನಲ್ಲಿ ಸಿಕ್ಕ 87.92 ಕಿಲೋ ಚಿನ್ನದ ಗಟ್ಟಿಗಳು ವಿದೇಶದ್ದು. ಅದರಲ್ಲಿ ನಮೂದಾಗಿರುವ ಗುರುತುಗಳು ಇದನ್ನು ದೃಢೀಕರಿಸಿವೆ. ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮೂಲಕವೇ ಆ ಗಟ್ಟಿಗಳನ್ನು ತರಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಕಂದಾಯ...