Bengaluru, ಮಾರ್ಚ್ 7 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 6ರ ಸಂಚಿಕೆಯಲ್ಲಿ ಸಿದ್ದೇಗೌಡ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜತೆ ವಾಗ್ವಾದ ಮುಂದುವರಿಸಿದ್ದಾನೆ. ಎಸ್‌ಪಿ ಜೊತೆ ನಾನು ಮಾತನಾಡಬೇಕು, ಕೇಸಿನ ಬಗ್ಗೆ ವಿವರ ನೀಡಬೇಕು ಎಂದು ಪೊಲೀಸರಲ್ಲಿ ಹೇಳುತ್ತಿರುವಾಗ, ಅಲ್ಲಿಗೆ ಭಾವನಾ ಕೂಡ ಬರುತ್ತಾಳೆ. ಭಾವನಾ ಜತೆ ಇನ್ನೇನು ಕೇಸಿನ ವಿವರ ನೀಡಬೇಕು, ಅಪಘಾತ ಮಾಡಿದ್ದು ನಾನೇ ಎಂದು ಒಪ್ಪಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಮರಿಗೌಡ ಕೂಡ ಅಲ್ಲಿಗೆ ಧಾವಿಸಿ ಬರುತ್ತಾನೆ. ಮರಿಗೌಡ ಬಂದು ಕೂಡಲೇ, ಸಿದ್ದುವನ್ನು ಪಕ್ಕಕ್ಕೆ ಕರೆದು, ಭಾವನಾ ಬಳಿ, ಕೇಸಿನ ಬಗ್ಗೆ ಈಗಷ್ಟೇ ನಾನು ಎಸ್‌ಪಿ ಜೊತೆ ಮಾತನಾಡಿದೆ. ಅದು ಬೇರೆ ಯಾರನ್ನೋ ಇನ್ಯಾವುದೋ ಪ್ರಕರಣದಲ್ಲಿ ಬಂಧಿಸಿದ್ದಾರೆ. ಹೀಗಾಗಿ ಅದು ನಮಗೆ ಬೇಕಾಗಿರುವ ವ್ಯಕ್ತಿಯಲ್ಲ, ನಾವಿನ್ನು ಇಲ್ಲಿಂದ ಹೊರಡೋಣ ಎಂದು ಹೇಳುತ್ತಾನೆ. ನಂತರ ಮೂವರೂ ಅಲ್ಲಿಂದ ಹೊರಡಲು ಅನುವಾಗುತ್ತಾರೆ. ಭಾವನಾಳಿಗೆ ಅಪಘಾತ ಎಸಗಿದ ವ್ಯಕ್ತಿ ಸಿಕ್ಕಿಲ್ಲ ಎಂದು ಬೇಸರವಾಗ...