Bengaluru, ಮಾರ್ಚ್ 4 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 3ರ ಸಂಚಿಕೆಯಲ್ಲಿ ಸಿದ್ದೇಗೌಡ್ರ ಜತೆ ಭಾವನಾ ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಜವರೇಗೌಡ್ರಲ್ಲಿ ಪತ್ನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮರಿಗೌಡ ಮತ್ತು ವಿನುವನ್ನು ದೇವಸ್ಥಾನಕ್ಕೆ ಹೋಗಲು ಹೇಳಿದ್ದೆ, ಆದರೆ ನೀವು ಸಿದ್ದೇಗೌಡ ಮತ್ತು ಭಾವನಾಳನ್ನು ಕಳುಹಿಸಿದ್ದೀರಿ, ಯಾಕೆ ಹಾಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಜವರೇಗೌಡರು, ಯಾರು ದೇವಸ್ಥಾನಕ್ಕೆ ಹೋದರೂ ಸರಿ, ಪೂಜೆ ಮಾಡಿಸಿಕೊಂಡು ಬಂದರೆ ಸಾಕು, ಅದಕ್ಕೆ ಯಾಕೆ ಇಷ್ಟೊಂದು ಕಿರಿಕಿರಿ ಮಾಡುತ್ತಿ, ಇನ್ನೊಮ್ಮೆ ಮರಿಗೌಡನೂ ಅವನ ಹೆಂಡತಿಯೂ ಹೋಗಿ ಬರಲಿ ಎಂದು ಹೇಳುತ್ತಾರೆ. ಅಷ್ಟರಲ್ಲಿ ಸಿದ್ದೇಗೌಡ ಮತ್ತು ಭಾವನಾ ದೇವಸ್ಥಾನದಿಂದ ವಾಪಸ್ ಮನೆಗೆ ಬರುತ್ತಾರೆ.

ವೀಣಾ ತಾಯಿಯನ್ನು ಸಂತೋಷ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಯಲ್ಲಿ ವೀಣಾ ಹಬ್ಬದ ಅಡುಗೆ ಮಾಡಿದ್ದಾಳೆ, ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವಾಗ, ಸಿಂಚನಾ ಫೋನ್‌ನಲ್ಲಿ ಮಾತನ...