Bengaluru, ಏಪ್ರಿಲ್ 19 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 18ರ ಸಂಚಿಕೆಯಲ್ಲಿ ಸಂತೋಷ್ ಮತ್ತು ಹರೀಶ ಮನೆಯ ಹಿಂದುಗಡೆ ಮಾತುಕತೆಯಲ್ಲಿ ತೊಡಗಿದ್ದಾರೆ. ಸಂತೋಷ, ಬಲವಾಗಿ ಹರೀಶನ ಕೊರಳಪಟ್ಟಿ ಹಿಡಿದು ಹಣ ಮತ್ತು ಚಿನ್ನದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಆಗ ಹರೀಶ, ಒಂದೊಂದಾಗಿ ಎಲ್ಲವನ್ನು ಬಾಯಿಬಿಟ್ಟಿದ್ದಾನೆ. ಫೈನಾನ್ಸ್‌ನವರ ಕಿರುಕುಳ, ಹಣಕಾಸಿನ ಸಮಸ್ಯೆಯಿಂದಾಗಿ ನಾನು ಈ ಕೆಲಸ ಮಾಡಬೇಕಾಯಿತು, ಹಣ ಕದ್ದಿರುವುದು ಹೌದು, ಸಿಂಚನಾಳ ಚಿನ್ನವನ್ನು ಬದಲಾಯಿಸಿರುವುದು ಕೂಡ ಹೌದು ಎಂದು ಹೇಳುತ್ತಾನೆ. ಹೀಗಾಗಿ ಸಂತೋಷ್‌ಗೆ ಎಲ್ಲವೂ ಸ್ಪಷ್ಟವಾಗಿದೆ. ಜತೆಗೆ ತಮ್ಮ ಹರೀಶನ ಮೇಲೆ ವಿಪರೀತ ಕೋಪವೂ ಬಂದಿದೆ.

ಹರೀಶನ ಬಳಿ ಸಂತೋಷ ನನ್ನ ಹಣವನ್ನು ಮರಳಿ ಕೊಡಬೇಕು, ನೀನು ಅದೇನು ಮಾಡುವೆ ಎಂದು ನನಗೆ ಗೊತ್ತಿಲ್ಲ, ನಿನ್ನನ್ನು ತಮ್ಮ ಎನ್ನಲು ನನಗೆ ಕಿರಿಕಿರಿಯಾಗುತ್ತಿದೆ. ತಮ್ಮ ಎನ್ನುವ ಒಂದೇ ಕಾರಣಕ್ಕೆ ನಾನು ನಿನ್ನನ್ನು ಸುಮ್ಮನೆ ಬಿಡುತ್ತಿದ್ದೇನೆ ಎಂದು ಹೇಳುತ್ತಾನೆ. ಜತೆಗೆ ಇನ್ನು ಮ...