Bengaluru, ಮಾರ್ಚ್ 7 -- Karnataka Budget 2025: ಕೊನೆಗೂ ಸರ್ಕಾರ ಹೇಳಿದಂತೆ, ಕನ್ನಡ ಚಿತ್ರೋದ್ಯಮದ ನಟ್ಟು ಬೋಲ್ಟನ್ನು ಟೈಟ್‌ ಮಾಡಿದೆ! ಇತ್ತೀಚೆಗಷ್ಟೇ ಡಿಸಿಎಂ ಹೇಳಿದ ಈ ಮಾತನ್ನು, ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಶಾಕ್‌ ಕೊಟ್ಟಿದೆ. ರಾಜ್ಯದಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಬೇಕಾಬಿಟ್ಟಿ ಟಿಕೆಟ್‌ ದರ ನಿಗದಿಯಾಗಿತ್ತು. ಇನ್ಮೇಲೆ, ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕರೂಪದ ಟಿಕೆಟ್‌ ದರ ನಿಗದಿ ಮಾಡಿ, ಸರ್ಕಾರ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಕನ್ನಡ ಸಿನಿಮಾಗಳ ಜತೆಗೆ ಪರಭಾಷೆಯ ಸಿನಿಮಾಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಆಗುತ್ತವೆ. ಕರ್ನಾಟಕದಿಂದಲೂ ಕೋಟಿ ಕೋಟಿ ಕಲೆಕ್ಷನ್‌ ಮಾಡುತ್ತಿವೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು, ಇದೀಗ ಚಿತ್ರೋದ್ಯಮಕ್ಕೆ ಬಿಸಿ ಮುಟ್ಟಿಸಿದೆ ಸರ್ಕಾರ. ಚಿತ್ರಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರತಿ ಚಿತ್ರಕ್ಕೆ 200 ದರ ನಿಗದಿ ಪಡಿಸಲಾಗಿದೆ. ಜತೆಗೆ ಸಿನಿಮಾವನ್ನು ಉದ್ಯಮ ಎಂದು ಪರಿಗಣಿಸಿ ಈ ನಿರ್ಧಾರಕ್ಕೆ ...