ಭಾರತ, ಫೆಬ್ರವರಿ 2 -- Asmin Mini Feature Film: ಗಂಟುಮೂಟೆಯಂಥ ಭಿನ್ನ ಚಿತ್ರವೊಂದನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದವರು ರೂಪಾ ರಾವ್. ಇದೊಂದು ಚಿತ್ರದ ಮೂಲಕವೇ ತಮ್ಮದು ಭಿನ್ನ ಪಥ ಅನ್ನೋದರ ಸುಳಿವು ನೀಡಿದ್ದ ಅವರು ಕೆಂಡ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ನಿರ್ದೇಶನಕ್ಕೆ ಮರಳಿರುವ ರೂಪಾ ರಾವ್ "ಅಸ್ಮಿನ್" ಎಂಬ ಮಿನಿ ಫೀಚರ್ ಫಿಲಂವೊಂದನ್ನು ನಿರ್ದೇಶಿಸಿದ್ದಾರೆ. ಈ ಮಿನಿ ಫೀಚರ್ ಫಿಲಂ ಇದೀಗ ಅವರ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಂಡಿದೆ.

ಅಸ್ಮಿನ್ ಈಗಾಗಲೇ ವಿಶ್ವಾದ್ಯಂತ ಗಮನ ಸೆಳೆದಿರುವ ಮಿನಿ ಫೀಚರ್ ಫಿಲಂ. ವಿಶ್ವದ ಪ್ರತಿಷ್ಠಿತ ಫಿಲಂ ಫೆಸ್ಟಿವಲ್‌ಗಳಿಗೆ ಆಯ್ಕೆಯಾಗಿ, ಹದಿನೈದು ಪ್ರಶಸ್ತಿಗಳನ್ನು ಪಡೆದುಕೊಂಡ ಹೆಗ್ಗಳಿಕೆ ಈ ಫೀಚರ್ ಫಿಲಂಗಿದೆ. ಇಂಡೋ ಫ್ರೆಂಚ್ ಫಿಲಂ ಫೆಸ್ಟಿವಲ್‌ನಲ್ಲಿ ಈ ಕಿರುಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿರುವ ತೇಜು ಬೆಳವಾಡಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ರೂಪಾ ರಾವ್ ಅವರಿಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಹಾಗೂ ಅತ್ಯುತ್ತ...