Bengaluru, ಜನವರಿ 31 -- Kichcha Sudeep: ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ, ಬಹುಭಾಷೆಗಳಲ್ಲಿಯೂ ತಮ್ಮ ನಟನಾ ಪ್ರತಿಭೆಯಿಂದ ಗುರುತಿಸಿಕೊಂಡು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ ನಟ ಕಿಚ್ಚ ಸುದೀಪ್.‌ ಇದೀಗ ಇದೇ ಕಿಚ್ಚ, ಇಂದಿಗೆ (ಜ. 31) ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 29 ವರ್ಷಗಳಾದವು. ಪ್ರತಿ ವರ್ಷ ಈ ದಿನವನ್ನೇ ಅಷ್ಟೇ ವಿಶೇಷವಾಗಿ ಬರಮಾಡಿಕೊಳ್ಳುವ ಸುದೀಪ್‌, ಈ ಬಾರಿಯೂ ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಈ ಪಯಣವನ್ನು ಮೆಲುಕು ಹಾಕಿದ ಸುದೀಪ್‌, "29 ವರ್ಷಗಳು.. ಈ ವರೆಗಿನ ನನ್ನ ಈ ಸುದೀರ್ಘ ಪ್ರಯಾಣಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವವಿದೆ. ಪ್ರೇಕ್ಷಕರನ್ನು ರಂಜಿಸುವುದು ಮತ್ತು ಅನೇಕರೊಂದಿಗೆ ಪ್ರತಿಧ್ವನಿಸುವ ಕಥೆಗಳನ್ನು ಹಂಚಿಕೊಳ್ಳುವುದೂ ಒಂದು ಗೌರವ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಬೆಂಬಲ ನನಗೆ ಸಿಕ್ಕ ನಿರಂತರ ಪ್ರೇರಣೆಯ ಮೂಲ. ಅಂಥ ಡೆಡಿಕೇಟೆಡ್‌ ಅಭಿಮಾನಿಗಳನ್ನು ಹೊಂದಿರುವುದು ನಿಜಕ್ಕೂ ನನ್ನ ಸೌಭಾಗ್ಯ" ಎಂದಿದ್ದಾರ...