ಭಾರತ, ಮಾರ್ಚ್ 2 -- Jaggesh counters DK Shivakumar: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಶನಿವಾರ‌ (ಮಾ. 1) ಸಂಜೆ ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಸಿಕ್ಕಿದೆ. ಕನ್ನಡ ಚಿತ್ರರಂಗದ ಹಲವರು, ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕನ್ನಡದ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಈ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟೇ ಸಿನಿಮಾ ಮಂದಿಯ ಆಗಮನವಾಗಿತ್ತು. ಇದನ್ನೇ ತುಸು ಗಂಭೀರವಾಗಿ ತೆಗೆದುಕೊಂಡು ಡಿಸಿಎಂ ಡಿಕೆ ಶಿವಕುಮಾರ್‌, ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಹೇಗೆ? ಎಂದು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ. ಇಲ್ಲದಿದ್ದರೆ, ನಟ್ಟು ಬೋಲ್ಟು ಟೈಟ್‌ ಮಾಡುವುದು ನಮಗೆ ಗೊತ್ತಿದೆ ಎಂದಿದ್ದರು. ಈಗ ಡಿಕೆಶಿ ಹೇಳಿಕೆಗೆ ನಟ ಜಗ್ಗೇಶ್‌ ಕೌಂಟರ್‌ ಕೊಟ್ಟಿದ್ದಾರೆ.

ಸಿನಿಮಾ ಕಾರ್ಯಕ್ರಮ ಆಗಿದ್ದರಿಂದ, ಸಿನಿಮಾ ಮಂದಿಯೇ ಇಲ್ಲದಿದ್ದಕ್ಕೆ ಡಿಕೆ ಶಿವಕುಮಾರ್‌ ಕೊಂಚ ಬಿರುಸಾಗಿಯೇ ಮಾತನಾಡಿದ್ದರು. ಇದನ್ನು ಎಚ್ಚರಿಕೆ ಎಂದಾದರೂ ಪರಿಗಣಿಸಿ, ಮನವಿ ಎಂದಾದರೂ ಪರಿಗಣಿಸಿ. ಈ ಬಗ್ಗೆ ಎಲ್ಲರಿ...