ಭಾರತ, ಜನವರಿ 28 -- ಪುಷ್ಪ 2 ಸಿನಿಮಾ ಬಿಡುಗಡೆಯ ದಿನ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ತಮ್ಮ ಜೀವ ಕಳೆದುಕೊಂಡಿದ್ದರು. ಆ ಕಾಲ್ತುಳಿತ ಪ್ರಕರಣದ ನಂತರ ತೆಲಂಗಾಣ ಹೈಕೋರ್ಟ್ ಹೊಸ ಆದೇಶ ನೀಡಿದೆ. ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ, ಚಿತ್ರಮಂದಿರದೊಳಗಡೆ 16 ವರ್ಷದೊಳಗಿನ ಮಕ್ಕಳನ್ನು ಬೆಳಿಗ್ಗೆ 11ಗಂಟೆಯ ಮೊದಲು ಮತ್ತು ರಾತ್ರಿ 11ರ ನಂತರ ಚಿತ್ರಮಂದಿರದೊಳಗೆ ಬಿಡುವಂತಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳು ಈ ಸಮಯದಲ್ಲಿ ಚಿತ್ರಮಂದಿರದೊಳಗಡೆ ಇರಲು ಅನುಮತಿ ನೀಡಬಾರದು ಎಂದು ತಿಳಿಸಿದ್ದಾರೆ.

ಬೆಳಿಗ್ಗೆ 11 ಗಂಟೆಯ ಮೊದಲು ಮತ್ತು ರಾತ್ರಿ 11ರ ನಂತರದ ಸಮಯದಲ್ಲಿ ಮಕ್ಕಳು ಸಿನಿಮಾ ನೋಡುವುದು ಸೂಕ್ತವಲ್ಲ. ಈ ಸಮಯದಲ್ಲಿ ಚಲನಚಿತ್ರಗಳನ್ನು ನೋಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

ಪುಷ್ಪ 2: ದಿ ರೂಲ್ ಮತ್ತು ಗೇಮ್ ಚೇಂಜರ್ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಸಮಯದಲ್ಲಿ ಬದಲಾವಣೆ ಮಾ...