Bengaluru, ಏಪ್ರಿಲ್ 18 -- ಕಣ್ಸನ್ನೆ ಮೂಲಕವೇ ವಿಂಕ್‌ ಗರ್ಲ್‌ ಎಂದು ರಾತ್ರೋ ರಾಥ್ರಿ ಸೆನ್ಸೆಷನ್‌ ಸೃಷ್ಟಿಸಿದವರು ನಟಿ ಪ್ರಿಯಾ ಪ್ರಕಾಶ್‌ ವಾರಿಯರ್.‌ ಮಲಯಾಳಿ ಮೂಲದ ಈ ನಟಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಆ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು, ಒಟಿಟಿಯಲ್ಲಿಯೂ ಕಳೆದ ವಾರದಿಂದಲೇ ಸ್ಟ್ರೀಮಿಂಗ ಆರಂಭಿಸಿದೆ.

ನಿರ್ಮಾಪಕ ಕೆ ಮಂಜು ನಿರ್ಮಾಣ ಮಾಡಿದ, ವಿ.ಕೆ ಪ್ರಕಾಶ್‌ ನಿರ್ದೇಶನದ ಸಿನಿಮಾ ವಿಷ್ಣುಪ್ರಿಯಾ. ಇದೀಗ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡ ಎರಡು ತಿಂಗಳ ಬಳಿಕ ಒಟಿಟಿಗೆ ಆಗಮಿಸಿದೆ.

ಫೆಬ್ರವರಿ 21ರಂದು ತೆರೆಕಂಡಿದ್ದ ಈ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಆದರೆ, ಹೆಚ್ಚು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ.

ಶ್ರೇಯಸ್‌ ಮಂಜು ಮತ್ತು ಪ್ರಿಯಾ ಪ್ರಕಾಶ್‌ ವಾರಿಯರ್‌, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್, ನಿಹಾಲ್ ರಾಜ್ ವಿಷ್ಣುಪ್ರಿಯಾ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟ...