Hyderabad, ಮಾರ್ಚ್ 24 -- ಒಟಿಟಿಯಲ್ಲಿ ವೈವಿಧ್ಯಮಯ ವಿಷಯವನ್ನು ಹೊಂದಿರುವ ಚಲನಚಿತ್ರಗಳನ್ನು ಡಿಜಿಟಲ್ ಸ್ಟ್ರೀಮ್ ಮಾಡಲಾಗುತ್ತದೆ. ಚಿತ್ರಮಂದಿರಗಳಲ್ಲಿ ಓಡದ ಅದೆಷ್ಟೋ ಸಿನಿಮಾಗಳು ಒಟಿಟಿಗೆ ಬಂದ ತಕ್ಷಣ ಫೇಮಸ್ ಆಗುತ್ತವೆ. ಅದೇ ಸಾಲಿಗೆ ಈಗ ಇನ್ನೆರಡು ಸಿನಿಮಾಗಳು ಸೇರಿದೆ. ಕಂಗನಾ ರನೌತ್ ಅವರ 'ಎಮರ್ಜೆನ್ಸಿ' ಮತ್ತು ಅಜಯ್ ದೇವಗನ್ ಅವರ 'ಆಜಾದ್' ಸಿನಿಮಾವನ್ನು ಹಲವರು ಇಷ್ಟಪಟ್ಟು ನೋಡುತ್ತಿದ್ದಾರೆ.

ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯದ ಚಲನಚಿತ್ರಗಳು ಒಟಿಟಿಯಲ್ಲಿ ಧೂಳೆಬ್ಬಿಸುತ್ತಿವೆ. ಈ ವರ್ಷ ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ದೊಡ್ಡ ಬಜೆಟ್‌ನ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಇಲ್ಲದೆ ಬಣಗುಟ್ಟಿದವು. ಈಗ ಅದೇ ಎರಡು ಸಿನಿಮಾಗಳು ನಿರಂತರವಾಗಿ ಒಟಿಟಿ ಟ್ರೆಂಡಿಂಗ್‌ನಲ್ಲಿವೆ.

ಬಾಲಿವುಡ್‌ ಕ್ವೀನ್ ಕಂಗನಾ ರನೌತ್ ಮೊದಲ ಬಾರಿಗೆ ನಿರ್ದೇಶಿಸಿದ ಐತಿಹಾಸಿಕ ರಾಜಕೀಯ ಚಿತ್ರ ಎಮರ್ಜೆನ್ಸಿ. ಕಂಗನಾ ರನೌತ್ ಚಿತ್ರಕಥೆ ಬರೆದು, ಮುಖ್ಯ ಪಾತ್ರದಲ್ಲಿ ನಟಿಸಿದ ಮತ್ತು ನಿರ್ಮಿಸಿದ ...