ಭಾರತ, ಮೇ 22 -- ಸಂಜು ವೆಡ್ಸ್ ಗೀತಾ 2' ಚಿತ್ರ ಮರುಬಿಡುಗಡೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಜೂನ್ 06ರಂದು ಚಿತ್ರ ಮರುಬಿಡುಗಡೆ ಆಗುತ್ತಿರುವ ವಿಷಯವನ್ನು ಎಚ್‍ಟಿ ಕನ್ನಡ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಪ್ರಕಟಿಸಿತ್ತು. ಈಗ ಚಿತ್ರದ ನಿರ್ದೇಶಕ ನಾಗಶೇಖರ್‌ ಅದನ್ನು ಖಚಿತ ಪಡಿಸಿದ್ದಾರೆ. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 'ಸಂಜು ವೆಡ್ಸ್ ಗೀತಾ 2' ಚಿತ್ರವನ್ನು ಮರುಬಿಡುಗಡೆ ಮಾಡುತ್ತಿರುವುದು ಏಕೆ? ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, '21 ನಿಮಿಷ ಗ್ರಾಫಿಕ್ಸ್ ಕೆಲಸ ಇತ್ತು. ಅದನ್ನು ಸೇರಿಸಿ ಕ್ಯೂಬ್ಗೆ ಕಳಿಸೋಣ ಎನ್ನುವಷ್ಟರಲ್ಲಿ ಚಿತ್ರಕ್ಕೆ ತಡೆಯಾಜ್ಞೆ ಬಂದಿತ್ತು. ಹಾಗಾಗಿ, ಅದನ್ನು ಸೇರಿಸುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ತಡೆಯಾಜ್ಞೆ ರದ್ದಾದರೂ, ದೃಶ್ಯಗಳನ್ನು ಸೇರಿಸಲು ಆಗದೇ, ಹಾಗೆಯೇ ಬಿಡುಗಡೆ ಮಾಡಬೇಕಾಯಿತು. ನಿಜ ಹೇಳಬೇಕೆಂದರೆ, ಆ 21 ನಿಮಿಷಗಳೇ ಚಿತ್ರದ ಹೃದಯ. ಬೇರೆ ದಾರಿ ಇರಲಿಲ್ಲ. ಅದನ್ನು ಪಕ್ಕಕ್ಕಿಟ್ಟು ಚಿತ್ರವನ್ನು ಬಿಡುಗ...