ಭಾರತ, ಮಾರ್ಚ್ 17 -- Chitradurga Wedding Chaos: ಮದುವೆಗೆ ಮುನ್ನಾ ದಿನ ಆರತಕ್ಷತೆ (ರಿಸೆಪ್ಶನ್‌) ಕಾರ್ಯಕ್ರಮದ ನಂತರ ಭೋಜನದ ವೇಳೆ ಕುಳಿತವರಿಗೆ ಕುಡಿಯಲು ತತ್‌ಕ್ಷಣ ನೀರು ನೀಡಲಿಲ್ಲ ಎಂಬ ಕಾರಣಕ್ಕೆ ಉಂಟಾದ ಜಗಳದ ಮದುವೆಯೇ ಮುರಿದು ಬೀಳುವಂತೆ ಮಾಡಿತು. ಇಂತಹ ವಿಲಕ್ಷಣ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಲಿಜ ಶ್ರೇಯಾ ಭವನದಲ್ಲಿ ಭಾನುವಾರ ನಡೆಯಿತು.

ತುಮಕೂರು ಜಿಲ್ಲೆ ಶಿರಾ ತಾಲೂಕು ಚಿರತಹಳ್ಳಿ ಗ್ರಾಮದ ಯುವತಿ ಹಾಗೂ ಜಗಳೂರು ಪಟ್ಟಣದ ಯುವಕನ ವಿವಾಹ ಭಾನುವಾರ (ಮಾರ್ಚ್ 16) ನಡೆಯಬೇಕಾಗಿತ್ತು. ವಧು- ವರ ಇಬ್ಬರೂ ಎಂಜಿನಿಯರ್‌ ಪದವೀಧರರು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಗಂಡಿನ ಕಡೆಯವರ ಪೈಕಿ ಕೆಲವರು ಶನಿವಾರ ರಾತ್ರಿ ಮದ್ಯಪಾನ ಮಾಡಿ ತಡ ರಾತ್ರಿ 1 ಗಂಟೆಗೆ ಊಟಕ್ಕೆ ಕುಳಿತರು. ಮಲಗಿದ್ದ ಕ್ಯಾಟರಿಂಗ್ ಸಿಬ್ಬಂದಿಯನ್ನು ಎಬ್ಬಿಸಿ ಊಟಕ್ಕೆ ಆಗ್ರಹಿಸಿದರು. ಅವರು ಊಟ ಬಡಿಸುವಾಗ ಕುಡಿಯುವ ನೀರು ಕೊಡುವುದು ತಡವಾಯಿತು ಎಂದು ಜಗಳ ಉಂಟಾಯಿತು. ಈ ಸಂ...