ಭಾರತ, ಫೆಬ್ರವರಿ 1 -- ಪ್ರಸ್ತುತ ಬಹುತೇಕ ಎಲ್ಲಾ ಕಡೆಗಳಲ್ಲಿ ಕೇಳಿಬರುವ ಸುದ್ದಿ, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು. ಕೇವಲ ವೃದ್ಧರಷ್ಟೇ ಅಲ್ಲ. ಏಳೆಂಟು ವರ್ಷದ ಮಗು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿದೆ. ಹಾಗಿದ್ದರೆ, ಹೃದಯಾಘಾತ ಅಥವಾ ಹಾರ್ಟ್ ಅಟ್ಯಾಕ್ ಆಗಲು ಯಾವುದು ಮುಖ್ಯ ಕಾರಣ ಎನ್ನುವುದನ್ನು ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ ವೃದ್ಧರಿಗಿಂತ ಹೆಚ್ಚಾಗಿ ಮಕ್ಕಳಲ್ಲೇ ಹೃದಯಾಘಾತ ಅಥವಾ ಹೃದ್ರೋಗ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಳಪೆ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲ ಒತ್ತಡಗಳು ಮಕ್ಕಳ ಹೃದಯವನ್ನು ಅಪಾಯಕ್ಕೆ ತಳ್ಳುವ ಸಂಭವನೀಯ ಘಟನೆಗಳು ಕೂಡ ಹೆಚ್ಚಾಗುತ್ತಿದೆ. ಹೌದು! ಮಕ್ಕಳನ್ನು ಶಾಲೆ, ಟ್ಯೂಷನ್ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ವಿಶ್ರಾಂತಿಯಿಲ್ಲದಂತೆ ಮಾಡುತ್ತಿರುವುದು ಸಾಮಾನ್ಯ. ಇದರ ಹೊರತಾಗಿಯೂ ಸ್ವಲ್ಪ ಸಮಯ ಸಿಕ್ಕರೆ ಮೊಬೈಲ್‌ಗಳಿಗೆ ಅಡಿಕ್ಟ್ ಆಗಿಬಿಡುತ್ತಾರೆ. ಇನ್ನು ಫಾಸ್ಟ್‌ಫುಡ್‌ ಸಂಸ್ಕೃತಿಯಂತೆ ಬೆಳೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರು ಹೆಚ್ಚು ಜಾಗರೂಕರಾಗಿರಬ...