ಭಾರತ, ಏಪ್ರಿಲ್ 24 -- ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿಗೆ ಸರ್ಕಾರಿ ಜಮೀನಲ್ಲಿ ರಸ್ತೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಕಲ್ಲೆಸೆದು ಪ್ರತಿಭಟಿಸುತ್ತಿದ್ದವರ ಮೇಲೆ ಕ್ವಾರಿ ಮಾಲೀಕ ಗುಂಡು ಹಾರಿಸಿದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ಕನಗಾನ ಕೊಪ್ಪ ಗ್ರಾಮದ ಸಮೀಪ ನಡೆದಿದೆ. ಗುಂಡು ಹಾರಿಸಿದ ಕ್ವಾರಿ ಮಾಲೀಕ ಸಕಲೇಶ ಕುಮಾರ್ ಹಾಗೂ ಗುಂಡು ತಗುಲಿ ಗಾಯಗೊಂಡ ವ್ಯಕ್ತಿ ಚಿಕನ್ ರವಿ. ಇದರಲ್ಲಿ ಸಕಲೇಶ ಕುಮರ್ ಮಾಜಿ ಎಂಎಲ್‌ಸಿ ವೈ ಎ ನಾರಾಯಣಸ್ವಾಮಿ ಅವರ ಸಂಬಂಧಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕನಗಾನ ಕೊಪ್ಪ ಗ್ರಾಮದ ಹೊರವಲಯದಲ್ಲಿ ಮೂರು ವರ್ಷಗಳ ಹಿಂದೆ ಕಲ್ಲು ಕ್ವಾರಿ ತೆರೆದ ಸಕಲೇಶ ಕುಮಾರ್‌, ಕ್ರಷರ್‌ನಿರ್ಮಾಣಕ್ಕೆ ನಾಲ್ಕು ಎಕರೆ ಜಮೀನು ಖರೀದಿಸಿದ್ದರು. ಇದಕ್ಕೆ, ಗಣಿ ಭೂ ವಿಜ್ಞಾನ ಇಲಾಖೆ ಅನುಮತಿ ಪಡೆದ ಬಳಿಕ ದಾರಿಗಾಗಿ ಸರ್ಕಾರಿ ಜಾಗದಲ್ಲಿ ಮಣ್ಣು ಹೊಡೆದು ಹಸನು ಮಾಡಲು ತೀರ್ಮಾನಿಸಿ ಬುಧವಾರ (ಏಪ್ರಿಲ್ 23) ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಹೊಡೆಯುತ್ತಿದ್ದ...