ಭಾರತ, ಮಾರ್ಚ್ 5 -- ಪನೀರ್‌ನಿಂದ ಮಾಡಿದ ಯಾವುದೇ ಖಾದ್ಯ ಆರೋಗ್ಯಕ್ಕೆ ಒಳ್ಳೆಯದು. ಪನೀರ್ ಬಟರ್ ಮಸಾಲ ಅಥವಾ ಪಾಲಕ್ ಪನೀರ್ ಮಾತ್ರ ಪ್ರಯತ್ನಿಸಬೇಡಿ, ಒಮ್ಮೆ ಪನೀರ್ ಬುರ್ಜಿಯನ್ನು ಪ್ರಯತ್ನಿಸಿ. ಇದನ್ನು ರೋಟಿ, ಚಪಾತಿ ಜೊತೆ ತಿನ್ನಲು ಅದ್ಭುತವಾಗಿರುತ್ತದೆ. ಚಿಕನ್ ಕೀಮಾ, ಮಟನ್ ಕೀಮಾ, ಎಗ್ ಬುರ್ಜಿ ತಿನ್ನಲು ಎಷ್ಟು ರುಚಿಕರವಾಗಿರುತ್ತದೋ ಹಾಗೆಯೇ ಪನೀರ್ ಭುರ್ಜಿ ಕೂಡ ಬಹಳ ರುಚಿಕರವಾಗಿರುತ್ತದೆ. ಈ ಖಾದ್ಯವನ್ನು ರುಚಿಕರವಾಗಿ ಮತ್ತು ಸುಲಭವಾಗಿ ಹೇಗೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಪದಾರ್ಥಗಳು: ತುರಿದ ಪನ್ನೀರ್ - ಒಂದು ಕಪ್, ಎಣ್ಣೆ - ಮೂರು ಕಪ್, ಬೆಣ್ಣೆ - ಒಂದು ಚಮಚ, ಜೀರಿಗೆ - ಒಂದು ಚಮಚ, ಈರುಳ್ಳಿ - ಎರಡು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಹಸಿ ಮೆಣಸಿನಕಾಯಿ - ಎರಡು, ಕಡಲೆ ಹಿಟ್ಟು - ಒಂದು ಚಮಚ, ಟೊಮೆಟೊ - ಒಂದು, ಅರಿಶಿನ - ¼ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ - ಒಂದು ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಜೀರಿಗೆ - ಅರ್ಧ ಚಮಚ, ಕಸೂರಿ ಮೇಥಿ - ಒಂದು ಚ...