ಭಾರತ, ಮಾರ್ಚ್ 20 -- ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ 4 ಹಗಲು 3 ರಾತ್ರಿಗಳ ಪ್ರವಾಸದ ಅನುಭವ ನೀಡುತ್ತದೆ ಎಂದು ಇನ್‌ ಫೋಸಿಸ್‌ ಮಾಜಿ ನಿರ್ದೇಶಕ ಮೋಹನ್‌ ದಾಸ್‌ ಪೈ ವರ್ಣಿಸಿದ್ದಾರೆ. ವಾಹನ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಒಆರ್‌ ಆರ್‌ ಸಿಲ್ಕ್‌ ಬೋರ್ಡ್‌ ಮತ್ತು ಮಾರತ್‌ ಹಳ್ಳಿ ಜಂಕ್ಷನ್‌ ಗಳನ್ನು ʼಚಾರ್‌ ಜಾಮ್‌ ಯಾತ್ರಾʼ ಎಂದು ಅವರು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಬಗ್ಗೆ ಇದೊಂದು ನೋವಿನ ಜೋಕ್‌ ಎಂದಿದ್ದಾರೆ.

ಔಟರ್‌ ರಿಂಗ್‌ ರಸ್ತೆ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌, ಮಾರತ್‌ ಹಳ್ಳಿ ಮತ್ತು ಎಚ್.‌ಎಸ್.‌ ಆರ್‌ ಲೇ ಔಟ್‌ ನಂತಹ ಹೆಸರುಗಳು ಬೆಂಗಳೂರನ್ನು ಚೆನ್ನಾಗಿ ಅರಿತುಕೊಂಡವರಲ್ಲಿ ನಡುಕ ಹುಟ್ಟಿಸುತ್ತದೆ. ಅದರಲ್ಲೂ ಈ ಮಾರ್ಗಗಳಲ್ಲಿ ದಿನನಿತ್ಯ ಸಂಚರಿಸುವವರಿಗೆ ಭೀತಿ ಹುಟ್ಟಿಸುವುದರಲ್ಲಿ ಆಶ್ಚರ್ಯವೇನಿಲ್ಲ.

1) ಒಆರ್‌ ಆರ್‌ ರಸ್ತೆ: ಬೆಂಗಳೂರಿನ ವಾಹನ ದಟ್ಟಣೆ ಹಗಲಿನ ಹಾರರ್‌ ಶೋ ಎಂದು ನೀವು ಒಪ್ಪಿಕೊಳ್ಳುವಿರಾದರೆ ಒಆರ್‌ ಆರ್‌ ರಸ್ತೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ಹೊರ ವರ...