ಭಾರತ, ಫೆಬ್ರವರಿ 22 -- ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಸಂಜೆ ಬೆಂಕಿ ಕಾಣಿಸಿಕೊಂಡು ಮುಂಜಾನೆವರೆಗೂ ಹೊತ್ತಿ ಉರಿದು, ಬಳಿಕ ತಣ್ಣಗಾಯಿತು. ಈ ಬೆಂಕಿ ಅನಾಹುತದಲ್ಲಿ 35 ಎಕರೆಯಷ್ಟು ಅರಣ್ಯ ನಾಶವಾಗಿದೆ ಎಂದು ಡಿಸಿಎಫ್ ಬಸವರಾಜು ಹೇಳಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದ್ದು, ಈ ದುರಂತದಲ್ಲಿ ಪ್ರಾಣಿ ಪಕ್ಷಿಗಳ ಪ್ರಾಣ ಹಾನಿಯಾಗಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಚಾಮುಂಡಿ ಬೆಟ್ಟದಲ್ಲಿ ಸಂಭವಿಸಿದ್ದು ಕಾಡ್ಗಿಚ್ಚು ಅಲ್ಲ. ಅದು ಕಿಡಿಗೇಡಿಗಳ ಕೃತ್ಯ. ಬೆಟ್ಟದ ಒಣಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಈ ಅನಾಹುತವಾಯಿತು. ಹೀಗಾಗಿಯೇ ಸಂಜೆ ಹೊತ್ತಲ್ಲಿ ಅಲ್ಲಿ ಬೆಂಕಿ ಕಾಣಿಸಿಕೊಂಡದ್ದು. ಗಾಳಿ ಹೆಚ್ಚಾಗಿದ್ದ ಕಾರಣ ಬೆಂಕಿ ಬೇಗ ವ್ಯಾಪಿಸಿತು. ಕಡಿದಾದ ಬೆಟ್ಟವಾಗಿದ್ದು, ರಸ್ತೆಯ ಎರಡೂ ಬದಿಯಿಂದ ಅದನ್ನು ನಂದಿಸುವ ಕೆಲಸ ನಡೆಯಿತು. ಆದಾಗ್ಯೂ ರಸ್ತೆ ಸಂಪರ್ಕದ ಕೊರತೆ ಹಾಗೂ ಗಾಳಿಯ ತೀವ್ರತೆ ಕಾರಣ ಬೆಂಕಿ ನಂದಿಸುವ ಕೆಲಸ ತ್ರಾಸದಾಯಕವಾಗಿತ್ತು. ಇದರ ‌ನಡುವೆಯೂ ಸತತ ಕಾರ್ಯಾಚರಣೆ ‌ನಡೆಸಿ ಕಳೆದ ರ...