ಭಾರತ, ಮಾರ್ಚ್ 29 -- ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟದಲ್ಲೀಗ ಯುಗಾದಿ ಹಬ್ಬದ ಜಾತ್ರೆಯ ಸಂಭ್ರಮ ಶುರುವಾಗಿದೆ. ಇಂದು (ಮಾರ್ಚ್ 29) ಜಾತ್ರೆಯ ಮೊದಲ ದಿನವಿದ್ದು ಸಾವಿರಾರು ಭಕ್ತರು ಆಗಮಿಸಿದ್ದರು. ಮಾರ್ಚ್‌ 31ರವರೆಗೆ ಈ ಜಾತ್ರಾ ಮಹೋತ್ಸವ ನಡೆಯಲಿದೆ.

ಜಾತ್ರೆಯ ಅಂಗವಾಗಿ ಇಂದು ಮುಂಜಾನೆಯಿಂದಲೇ ಮಾದಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ, ಹೋಮ ಹವನ, ಮಹಾ ಮಂಗಳಾರತಿ ಸೇರಿದಂತೆ ಸಕಲ ಪೂಜಾ ಕೈಂಕರ್ಯಗಳು ಭಕ್ತಿ, ಭಾವದಿಂದ ನೆರವೇರಿದವು.

‌ಯುಗಾದಿ ಅಮವಾಸ್ಯೆಯ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಸಾವಿರಾರು ಜನ ಭಕ್ತರು ಭೇಟಿ ನೀಡಿದ್ದರು. ನಿನ್ನೆ ಸಂಜೆಯಿಂದಲೇ ಈ ಕ್ಷೇತ್ರವು ದೀಪಾಲಂಕಾರಗಳಿಂದ ಜಗಮಗಿಸುತ್ತಿತ್ತು.

ಇಂದಿನಿಂದ ಮೂರು ದಿನಗಳ ಕಾಲ ದ್ವಿ ಚಕ್ರ ಮತ್ತು ತ್ರಿ ಚಕ್ರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಮಲೆ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಬಹಳ ಅದ್ಧ...