Chamarajnagar, ಏಪ್ರಿಲ್ 16 -- ಚಾಮರಾಜನಗರ: ಕರ್ನಾಟಕದಲ್ಲೇ ಅತಿ ಹೆಚ್ಚು ಅರಣ್ಯ, ವನ್ಯಜೀವಿ ಧಾಮಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಗಿರಿಜನರ ವಾಸವೂ ಅಧಿಕ. ಹೆಚ್ಚು ಹಾಡಿಗಳು ಚಾಮರಾಜನಗರ ಜಿಲ್ಲೆಯಲ್ಲಿವೆ. ಮಲೈಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ ಹಾಗೂ ಬಂಡೀಪುರ ಅರಣ್ಯದಂಚಿನಲ್ಲಿ ಹಲವು ಹಾಡಿಗಳಿವೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಗಿರಿಜನರಿಗೆ ಪುನರ್‌ವಸತಿ ಕಲ್ಪಿಸಿದ್ದರೆ, ಇನ್ನೂ ಕೆಲವು ಕಡೆ ಕಾಡಿನ ಭಾಗದ ಹಾಡಿಗಳಲ್ಲೇ ಜನ ವಾಸಿಸುತ್ತಿದ್ಧಾರೆ. ಹಲವು ಹಾಡಿಗಳಿಗೆ ಈಗಲೂ ವಿದ್ಯುತ್‌ ಸಂಪರ್ಕವೂ ಇಲ್ಲ. ಹಾಡಿ ಜನರಿಗೆ ಸೋಲಾರ್‌ ವಿದ್ಯುತ್‌ ಸೌಲಭ್ಯ ನೀಡಿದ್ದರೂ ಕಾಯಂ ವಿದ್ಯುತ್‌ ಸಂಪರ್ಕ ಕೊಡುವ ಪ್ರಯತ್ನ ನಡೆದೇ ಇದೆ. ಸ್ಥಳೀಯರ ಬೇಡಿಕೆಗ ಸ್ಪಂದಿಸಿರುವ ಕರ್ನಾಟಕ ಸರ್ಕಾರ ಈಗ ಹಾಡಿಗಳಿಗೆ ವಿದ್ಯುತ್‌ ಕಲ್ಪಿಸುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯದಂಚಿನಲ್ಲಿರುವ ಎಲ್ಲಾ 125 ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಅರಣ್ಯದೊಳಗಿರುವ 33 ಹಾಡಿಗಳ ಪೈಕಿ 15 ಹಾಡಿಗಳಿಗೆ ವಿದ್ಯುತ್‌ ...