ಭಾರತ, ಏಪ್ರಿಲ್ 15 -- ನಾಲ್ಕೈದು ದಿನಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಮೈಸೂರು ರಾಜಮನೆತನದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಚಾಮರಾಜನಗರದ ಜಿಲ್ಲಾಧಿಕಾರಿಗಳಿಗೆ ಬರೆದ ಒಂದು ವಿಚಿತ್ರ ಪತ್ರ ನನ್ನನ್ನು ಸಖೇದಾಶ್ಚರ್ಯವಾಗಿಸಿತು. ಪ್ರಸಕ್ತ ರಾಜಮಾತೆ ಪ್ರಮೋದಾದೇವಿ, ಶ್ರೀ ಚಾಮರಾಜ ಒಡೆಯರು (28-07-1774 ರಿಂದ 14-04-1796) ಚಾಮರಾಜನಗರ ಜಿಲ್ಲೆಗೆ ಒಂದೂವರೆ ಸಾವಿರ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಅದರ ಹಕ್ಕುದಾರರಾದ ನಮಗೆ ಅಷ್ಟೂ ಭೂಮಿಯನ್ನು ವಾಪಸ್ಸು ಕೊಡಬೇಕೆಂದು ಹಕ್ಕು ಮಂಡಿಸಿದ್ದಾರೆ.

ಈ ಬೆರಗಿನ ವಾರ್ತೆಯು ಚಾಮರಾಜನಗರ ತಾಲ್ಲೂಕಿನ ಜನರನ್ನು ಭಯಭೀತರನ್ನಾಗಿಸಿದೆ. ಚಾಮರಾಜ ಒಡೆಯರು ಅಲ್ಲಿನ ದೀನ ದುರ್ಬಲರಿಗೆ, ದಲಿತರಿಗೆ, ತುಳಿಯಲ್ಪಟ್ಟವರಿಗೆ ಎಂದು ಉದಾರವಾಗಿ ದಾನ ಮಾಡಿದ್ದ ಭೂಮಿಯನ್ನು ಇಂದು ಶ್ರೀಮತಿ ಪ್ರಮೋದಾದೇವಿ ಹಿಂದಿರುಗಿಸುವಂತೆ ತಕರಾರು ಮಂಡಿಸಿರುವುದನ್ನು ಕೇಳಿದಾಗ ಚಾರಿತ್ರಿಕ ದೃಷ್ಟಿಯಿಲ್ಲದ ದೀನ-ದಲಿತರ ಮೇಲೆ ಪ್ರೀತಿ-ವಿಶ್ವಾಸವಿಲ್ಲದ ರಾಜಮಾತೆಯ ಬಗ್ಗೆ ಜಿಗುಪ್ಸೆ ಉಂಟಾಯಿತು.

ನಿಜ ಹೇಳಬೇಕ...