ಭಾರತ, ಮಾರ್ಚ್ 9 -- ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್​ಗಳಿಂದ ಟೀಮ್ ಇಂಡಿಯಾ ಗೆಲ್ಲುವುದರೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗೆ ತೆರೆ ಬಿದ್ದಿದೆ. ಭಾರತ ತಂಡಕ್ಕಿದು ದಾಖಲೆ 3ನೇ ಚಾಂಪಿಯನ್ಸ್ ಟ್ರೋಫಿಯಾಗಿದೆ. ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್​ ಸೋಲಿಗೆ 25 ವರ್ಷಗಳ ನಂತರ ಸೇಡು ತೀರಿಸಿಕೊಂಡಿದೆ. 2002, 2013ರಲ್ಲಿ ಪ್ರಶಸ್ತಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿದೆ. ಹಾಗಾದರೆ ಚಾಂಪಿಯನ್ ಭಾರತ ತಂಡಕ್ಕೆ ಸಿಕ್ಕಿರುವ ಪ್ರಶಸ್ತಿ ಮೊತ್ತ ಎಷ್ಟು? ರನ್ನರ್​ಅಪ್ ನ್ಯೂಜಿಲೆಂಡ್​ಗೆ ಸಿಕ್ಕಿದ್ದೆಷ್ಟು? ಯಾವ ತಂಡಕ್ಕೆ ಎಷ್ಟು ಮೊತ್ತ ದೊರೆಕಿದೆ ಎನ್ನುವುದರ ವಿವರ ಇಂತಿದೆ.

ಇದನ್ನೂ ಓದಿ: ಐಪಿಎಲ್ 2025ರ ಉಚಿತ ಸ್ಟ್ರೀಮಿಂಗ್ ಇಲ್ಲ; ಜಿಯೋ-ಹಾಟ್‌ಸ್ಟಾರ್‌ ವಿಲೀನ ಬಳಿಕ ಹೊಸ ಕ್ರಮ ಸಾಧ್ಯತೆ, ಚಂದಾದಾರಿಕೆ ಯೋಜನೆ ಘೋಷಣೆ

ಚಾಂಪಿಯನ್ಸ್ ಟ್ರೋಫಿ ಬಹುಮಾನ ವಿಜೇತರಿಗೆ ಸಿಗುವ ಮೊತ್ತವು ಐಪಿಎಲ್​ನಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ರಿಷಭ್ ಪಂ...