ಭಾರತ, ಮಾರ್ಚ್ 9 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ (India vs New Zealand) ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ ಆಡುವ ಬಳಗದಲ್ಲಿ ಪ್ರಮುಖ ವೇಗಿ ಮ್ಯಾಟ್ ಹೆನ್ರಿ (Matt Henry) ಸ್ಥಾನ ಪಡೆಯಲು ವಿಫಲರಾದರು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಹೆನ್ರಿ, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. ಟೂರ್ನಿಯಲ್ಲಿ ಈವರೆಗೂ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದ ಹೆನ್ರಿ, ನಿರ್ಣಾಯಕ ಪಂದ್ಯದಲ್ಲಿ ಸ್ಥಾನ ವಂಚಿತರಾಗಿದ್ದಕ್ಕೆ ಬೇಸರಗೊಂಡರು.

ಟಾಸ್‌ಗೂ ಮುಂಚಿತವಾಗಿ ದುಬೈ ಸ್ಟೇಡಿಯಂನಲ್ಲಿ ಹೆನ್ರಿ ಬೌಲಿಂಗ್‌ ಅಭ್ಯಾಸ ಮಾಡುವುದು ಕಂಡುಬಂತು. ಆದರೆ, ಕೊನೆಗೆ ಅವರನ್ನು ಆಡುವ ಬಳಗದಿಂದ ಕೈಬಿಡಲಾಯಿತು. ಫೈನಲ್ ಪಂದ್ಯಕ್ಕೆ ನಾಥನ್ ಸ್ಮಿತ್ ಅವರನ್ನು ತಂಡಕ್ಕೆ ಸೇರಿಸಲಾಯ್ತು. ಮುಖ್ಯ ಪಂದ್ಯಕ್ಕೆ ಪ್ರಮುಖ ವೇಗಿಯ ಅನುಪಸ್ಥಿತಿಯು ಕಿವೀಸ್‌ ತಂಡವನ್ನು ಕಾಡಲಿದೆ.

33 ವರ್ಷದ ಅನುಭವಿ ಆಟಗಾರ, ಫೈನಲ್ ಪಂದ್ಯ ಆಡಲು ಸಾಧ್ಯವಾಗುತ್ತಿ...