ಭಾರತ, ಮಾರ್ಚ್ 8 -- ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೈನಲ್​ಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ದುಬೈನ ಐಸಿಸಿ ಅಕಾಡೆಮಿಯಲ್ಲಿ ನೆಟ್ ಸೆಷನ್ ಅಭ್ಯಾಸದ ನಡೆಸುವ ಅವಧಿಯಲ್ಲಿ ಭಾರತದ ಹಿರಿಯ ಬ್ಯಾಟರ್​ ವಿರಾಟ್ ಕೊಹ್ಲಿ ಅವರಿಗೆ ಸಣ್ಣ ಗಾಯವಾಗಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ನೆಟ್ಸ್​ನಲ್ಲಿ ವೇಗದ ಬೌಲರ್​ ಎಸೆತಗಳನ್ನು ಎದುರಿಸುವ ವೇಳೆ ಕೊಹ್ಲಿ ಮೊಣಕಾಲಿಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ. ಗಾಯವಾದ ಬೆನ್ನಲ್ಲೇ ನೆಟ್ ಸೆಷನ್ ತಕ್ಷಣವೇ ನಿಲ್ಲಿಸಿದ ಕೊಹ್ಲಿಗೆ ತಕ್ಷಣ ಭಾರತ ತಂಡದ ಫಿಸಿಯೋಥೆರಪಿಸ್ಟ್​ಗಳು ಚಿಕಿತ್ಸೆ ನೀಡಿದ್ದಾರೆ. ಗಾಯದ ಜಾಗಕ್ಕೆ ನೋವು ನಿವಾರಕ ಸ್ಪ್ರೇ ಮಾಡಿದ್ದಾರೆ.

ವರದಿಯ ಪ್ರಕಾರ, ಗಾಯಗೊಂಡ ವಿರಾಟ್ ಕೊಹ್ಲಿ ಅವರು ನೋವಿನೊಂದಿಗೆ ನೆಟ್ ಸೆಷನ್​ ನೋಡುತ್ತಾ ಮೈದಾನದಲ್ಲೇ ಉಳಿದಿದ್ದರು. ಉಳಿದ ಆಟಗಾರರ ತರಬೇತಿ ವೀಕ್ಷಿಸಿದರು. ಆದರೆ ಈ ಗಾಯವು ಗಂಭೀರವಲ್ಲ ಎಂದು ಇದೇ ವರದಿ ಹೇಳುತ್ತಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಆಡುವ ಅನುಭವಿ ಬ್ಯಾ...