ಭಾರತ, ಮಾರ್ಚ್ 6 -- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯಕ್ಕೂ ಮುನ್ನ ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್​-6 ಆಟಗಾರರ ಪಟ್ಟಿಯನ್ನು ಈ ಮುಂದೆ ತಿಳಿಯೋಣ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2002-2013ರ ರವರೆಗೆ ಗೇಲ್, 17 ಪಂದ್ಯಗಳಲ್ಲಿ 52.73 ಸರಾಸರಿಯೊಂದಿಗೆ 791 ರನ್ ಗಳಿಸಿದ್ದಾರೆ. 3 ಶತಕ ಮತ್ತು 1 ಅರ್ಧಶತಕ ಗಳಿಸಿದ್ದಾರೆ.

2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಆಸೀಸ್​ ವಿರುದ್ಧ 84 ರನ್ ಗಳಿಸಿ ಶಿಖರ್ ಧವನ್ ದಾಖಲೆಯನ್ನೇ ಮುರಿದು 2ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಪ್ರಸ್ತುತ ಕೊಹ್ಲಿ 17 ಪಂದ್ಯಗಳಲ್ಲಿ 82.88 ಸರಾಸರಿಯಲ್ಲಿ 746 ರನ್ ಗಳಿಸಿದ್ದಾರೆ. ಒಂದು ಶತಕ, 6 ಅರ್ಧಶತಕ ಗಳಿಸಿದ್ದಾರೆ. ಇದೀಗ ಅಗ್ರಸ್ಥಾನಕ್ಕೇರಲು 46 ರನ್ ಮಾತ್ರ ಬೇಕಿದೆ.

ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ 3ನೇ ಸ್ಥಾನದಲ್ಲಿದ್ದಾರೆ...