ಭಾರತ, ಮಾರ್ಚ್ 11 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಮುಕ್ತಾಯವಾಗಿದೆ. ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸಿದ ಭಾರತ ಪ್ರಶಸ್ತಿಗೆ ಮುತ್ತಿಕ್ಕಿತು. ಚಾಂಪಿಯನ್ಸ್ ಟ್ರೋಫಿಯ 9ನೇ ಆವೃತ್ತಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಭದ್ರತಾ ಕಾರಣಗಳಿಂದಾಗಿ ಭಾರತವು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದ್ದರಿಂದ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ದುಬೈನಲ್ಲಿ ಎಲ್ಲಾ ಪಂದ್ಯಗಳಲ್ಲಿ ಸೆಣಸಿತು. ಆದರೆ ಒಂದೇ ಮೈದಾನದ ಲಾಭ ಪಡೆದ ಭಾರತ ತಂಡವನ್ನು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದರು. ಭಾರತದ ವಿರುದ್ಧ ಆಡಲು ದುಬೈಗೆ ಅಥವಾ ಪಾಕಿಸ್ತಾನದಲ್ಲಿ ಮೈದಾನದಿಂದ ಮೈದಾನಕ್ಕೆ ತೆರಳಲು ಹಲವು ತಂಡಗಳು ಪ್ರಯಾಣದಲ್ಲಿ ಸಮಯ ವ್ಯರ್ಥ ಮಾಡಿದವು. ಭಾರತ ಮಾತ್ರ ಇದ್ದಲ್ಲೇ ಇತ್ತು. ಹಾಗಾದರೆ ಯಾವ ತಂಡವು ಹೆಚ್ಚು ಪ್ರಯಾಣಿಸಿತು? ಇಲ್ಲಿದೆ ವಿವರ.

ಕ್ರಿಕ್ ಟ್ರಾಕರ್ ವರದಿಯ ಪ್ರಕಾರ, ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಒಂದೇ ಸ್ಥಳದಲ್ಲಿ ಆಡಿ...