ಭಾರತ, ಫೆಬ್ರವರಿ 24 -- ಯುವ ಆಟಗಾರ ರಚಿನ್ ರವೀಂದ್ರ ಅವರ ಸೊಗಸಾದ ಶತಕ (112) ಹಾಗೂ ಬೌಲರ್​​ಗಳ ಸಂಘಟಿತ ನಿರ್ವಹಣೆಯ ಬಲದಿಂದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್​ ಅಂತರದಿಂದ ಅಮೋಘ ಗೆಲುವು ದಾಖಲಿಸಿದ ನ್ಯೂಜಿಲೆಂಡ್​, ಎ ಗುಂಪಿನಿಂದ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿದೆ. ಜೊತೆಗೆ ಭಾರತ ತಂಡವನ್ನೂ ಒಟ್ಟಿಗೆ ನಾಲ್ಕರ ಘಟ್ಟಕ್ಕೆ ಕರೆದೊಯ್ದಿರುವುದು ಮತ್ತೊಂದು ವಿಶೇಷ. ಟೂರ್ನಿ ಆರಂಭಗೊಂಡ ಆರೇ ದಿನಗಳಲ್ಲಿ ಸೆಮೀಸ್​ ಸ್ಥಾನಗಳು ಖಚಿತವಾಗಿವೆ.

ಆದರೆ, ಈ ಪಂದ್ಯದಲ್ಲಿ ಸೋತು ಒಂದು ಪಂದ್ಯ ಬಾಕಿ ಇರುವಾಗಲೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದ ಬಾಂಗ್ಲಾ, ಸಾಸಿವೆ ಕಾಳಿನಷ್ಟು ಸೆಮೀಸ್ ಆಸೆ ಉಳಿಸಿಕೊಂಡಿದ್ದ ಪಾಕಿಸ್ತಾನವನ್ನೂ ತನ್ನೊಂದಿಗೆ ಕರೆದುಕೊಂಡು ಹೋಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಕಿವೀಸ್, 2ನೇ ಸ್ಥಾನಕ್ಕೆ ಕುಸಿದ ಭಾರತ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಮಾರ್ಚ್​ 2ರಂದು ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಅಗ್ರಸ್ಥಾನ ಪಡೆಯಲು ಹೋರಾಟ ನಡೆಸಲಿವೆ.

ಆದರೆ 29 ವರ್ಷಗ...