ಭಾರತ, ಮಾರ್ಚ್ 9 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ದಾಖಲೆಯ 3ನೇ ಚಾಂಪಿಯನ್ಸ್ ಟ್ರೋಫಿ ಕಿರೀಟಕ್ಕೆ ಮುತ್ತಿಕ್ಕಿ ಸಂಭ್ರಮಿಸಿದೆ. ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್​ ಸೋಲಿಗೆ 25 ವರ್ಷಗಳ ನಂತರ ಸೇಡು ತೀರಿಸಿಕೊಂಡಿದೆ. 2002, 2013ರಲ್ಲಿ ಪ್ರಶಸ್ತಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿದೆ. 2017ರಲ್ಲಿ ರನ್ನರ್​ಅಪ್ ಆಗಿದ್ದ ಮೆನ್ ಇನ್ ಬ್ಲ್ಯೂ, 2024ರ ವಿಶ್ವಕಪ್ ನಂತರ ಸತತ 2ನೇ ಐಸಿಸಿ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಟೂರ್ನಿಯಲ್ಲಿ ಅಜೇಯ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದೆ ಭಾರತ.

ತವರಿನಲ್ಲಿ 2023ರ ಏಕದಿನ ವಿಶ್ವಕಪ್ ಸೋತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಟೀಮ್ ಇಂಡಿಯಾ, ಸತತ 2ನೇ ಟ್ರೋಫಿ ಗೆದ್ದು ಸಮಾಧಾನಪಡಿಸಿದೆ. ಕಿವೀಸ್ ನೀಡಿದ್ದ 252 ರನ್​ಗಳ ಗುರಿ ಬೆನ್ನಟ್ಟಿದ ರೋಹಿತ್ ಪಡೆ, 49 ಓವರ್​​ಗಳಲ್ಲಿ ಗುರಿ ಮುಟ್ಟುವುದರೊಂದಿಗೆ...