ಭಾರತ, ಫೆಬ್ರವರಿ 27 -- ಬೇಸಿಗೆ ಆರಂಭವಾಗುವ ಈ ಹೊತ್ತಿನಲ್ಲೇ ಬಿಸಿಲ ಝಳ ಜೋರಾಗಿದೆ. ಈ ವರ್ಷ ಬಿಸಿಲಿನ ಪ್ರತಾಪ ಇನ್ನೂ ಜೋರಿದೆ. ಈ ಸಮಯದಲ್ಲಿ ಆರೋಗ್ಯ ಹಾಗೂ ಚರ್ಮದ ಕಾಳಜಿಗೆ ವಿಶೇಷ ಗಮನ ಕೊಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಚರ್ಮಕ್ಕೆ ಹಾನಿ ಮಾಡುವ ಕಾರಣ ಸನ್‌ಸ್ಕ್ರೀನ್ ಬಳಕೆಯ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು.

ಹಾಗಂತ ಎಲ್ಲರಿಗೂ ಎಲ್ಲಾ ಸನ್‌ಸ್ಕ್ರೀನ್ ಹೊಂದಿಕೆ ಆಗುವುದಿಲ್ಲ. ಸನ್‌ಸ್ಕ್ರೀನ್ ಬಳಕೆಯ ವಿಚಾರದಲ್ಲಿ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿದುಕೊಂಡಿರಬೇಕು. ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನಾವು ಸನ್‌ಸ್ಕ್ರೀನ್ ಬಳಕೆ ಮಾಡಬೇಕು. ಡಲ್‌ ಸ್ಕಿನ್‌ ಇರುವವರಿಗೆ, ಆಯಿಲ್ ಸ್ಕಿನ್ ಇರುವವರಿಗೆ, ಬಿರುಕು ಚರ್ಮದವರಿಗೆ ಹೀಗೆ ಪ್ರತಿ ಚರ್ಮದ ಪ್ರಕಾರಕ್ಕೂ ಹೊಂದುವ ಸನ್‌ಸ್ಕ್ರೀನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಸನ್‌ಸ್ಕ್ರೀನ್‌ ಕುರಿತು ಒಂದಿಷ್ಟು ವಿಚಾರಗಳು ಇಲ್ಲಿವೆ.

ಸೂರ್ಯನ ವಿಕಿರಣಗಳಿಂದ ರಕ್ಷಣೆ: ಸೂರ್ಯನ ಯುವಿ ಕಿರಣ ಅಥವಾ ಅತಿ ನೇರಳೆ ಕಿರಣಗಳು ಚರ್ಮಕ್ಕೆ ಉಂಟು ಮಾಡ...