Bangalore, ಮಾರ್ಚ್ 31 -- Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನೀಡುತ್ತಿದ್ದಾರೆ ಡೈರೆಕ್ಟರ್‌. ವೀಕ್ಷಕರಿಗೆ ಅನಿರೀಕ್ಷಿತ ತಿರುವುಗಳನ್ನು ನೀಡುತ್ತ ಸೀರಿಯಲ್‌ ಟಿಆರ್‌ಪಿ ಹೆಚ್ಚಿಸುವ ಪ್ರಯತ್ನವೂ ಆಗಿರಬಹುದು. ಈ ಸೀರಿಯಲ್‌ನಲ್ಲಿ ಈಗ ಗಟ್ಟಿ ಕಥೆಯ ಬದಲು ‌ಆ ಕ್ಷಣಕ್ಕೆ ವಾಹ್‌ ಎಣಿಸುವಂತಹ ರೀಲ್ಸ್‌ ಹಾದಿ ಆಯ್ಕೆ ಮಾಡಿದಂತೆ ಇದೆ.

ಜೈದೇವ್‌ ಮತ್ತು ದಿಯಾ ಲವರ್‌ಗಳು. ಮಲ್ಲಿ ಎಂಬ ಯುವತಿಯನ್ನು ಅನಿರೀಕ್ಷಿತವಾಗಿ ಮದುವೆಯಾದವನು ಜೈದೇವ್‌. ಮನೆಯ ಕೆಲಸದಾಕೆ ಜತೆ ಅಕ್ರಮ ಸಂಬಂಧ ಮಾಡಿ ಆಕೆಯನ್ನು ಬಸುರಾಗಿಸಿದ್ದ ಜೈದೇವ್‌.

ಮಲ್ಲಿಗೆ ಮೋಸ ಮಾಡಿ ಅಪೇಕ್ಷಾಳನ್ನು ಮದುವೆಯಾಗಲು ಜೈದೇವ್‌ ಬಯಸಿದ್ದ. ಆದರೆ, ಆ ಸಮಯದಲ್ಲಿ ಭೂಮಿಕಾ ಮತ್ತು ಗೌತಮ್‌ಗೆ ಸತ್ಯ ಗೊತ್ತಾಗಿ ಜೈದೇವ್‌ ಜತೆ ಮಲ್ಲಿಯನ್ನು ಮದುವೆ ಮಾಡಿಸಿದ್ದರು.

ಮಲ್ಲಿಗೆ ಮೋಸ ಮಾಡುತ್ತ ಜೈದೇವ್‌ ಇದೇ ಚಮಕ್‌ಚಲ್ಲೋ ಜತೆ ಕಾಲಕಳೆಯುತ್ತಿದ್ದ. ಒಮ್ಮೆ ಈ ವಿಷಯ ಗೊತ್ತಾಗಿ ಗೌತಮ್‌ ವಾರ್ನಿಂ...