Bangalore, ಏಪ್ರಿಲ್ 15 -- Supreeetha Satyanarayan Engagement: ಕನ್ನಡದ ಸೀತಾ ವಲ್ಲಭ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್‌ ಇದೀಗ ತನ್ನ ಎಂಗೇಂಜ್‌ಮೆಂಟ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಮತ್ತು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಾಯಿ ತಂದೆ ಎಲ್ಲ ನೀನೆ ಯಾಕೆ ಬೇರೆ ನಂಟು, ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು, ಜಗವೆಲ್ಲ ಮಾದರಿ ಈ ಪ್ರೇಮಕೆ ನನ್ನ ಎದೆಯಾಳೋ ಧಣಿ ನೀನೆ, ನಿನ್ನ ಸಹಚಾರಿಣಿ ನಾನೇ ಎಂಬ ಹಾಡಿನ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈಕೆ ಎಂಗೇಜ್‌ಮೆಂಟ್‌ ಆಗಿರುವುದು ಚಂದನ್‌ ಶೆಟ್ಟಿ. ಅಂದಹಾಗೆ ಇವರು ರಾಪರ್‌ ಚಂದನ್‌ ಶೆಟ್ಟಿ ಅಲ್ಲ. ನಿವೇದಿತಾ ಗೌಡ ಮಾಜಿ ಪತಿಯಲ್ಲ. ಇವರು ಕೊಡಗು ಜಿಲ್ಲೆಯವರು. ಉದ್ಯಮಿ, ಡಿಜಿಟಲ್‌ ಕ್ರಿಯೆಟರ್‌ ಆಗಿ ಗುರುತಿಸಿಕೊಂಡಿದ್ದಾರೆ.

ನಟಿ ಸುಪ್ರೀತಾ ಸತ್ಯನಾರಾಯಣ್‌ಗೂ ಉದ್ಯಮಿ ಚಂದನ್‌ ಶೆಟ್ಟಿಗೂ ಇದೇ ಮಾರ್ಚ್‌ 12ರಂದು ನಿಶ್ಚಿತಾರ್ಥ ನಡೆದಿದೆ. ನಿಶ್ಚಿತಾರ್ಥದ ಫೋಟೋಗಳನ್ನು ನಿನ್ನೆಯಷ್ಟೇ ಹ...